ಹನಿಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದ ಡಿಆರ್ ಡಿಓ ಹಿರಿಯ ವಿಜ್ಞಾನಿ: ನಿರ್ದೇಶಕ ಹುದ್ದೆಯಿಂದ ವಜಾ

ಹನಿಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದ ಹಿರಿಯ ವಿಜ್ಞಾನಿಯೊಬ್ಬರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ- ಡಿಆರ್ ಡಿಒ ಸೇವೆಯಿಂದ ವಜಾಗೊಳಿಸಿದೆ.
ಹಿರಿಯ ವಿಜ್ಞಾನಿ ಪ್ರದೀಪ್ ಕುರುಲ್ಕರ್
ಹಿರಿಯ ವಿಜ್ಞಾನಿ ಪ್ರದೀಪ್ ಕುರುಲ್ಕರ್

ನವದೆಹಲಿ: ಹನಿಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದ ಹಿರಿಯ ವಿಜ್ಞಾನಿಯೊಬ್ಬರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ- ಡಿಆರ್ ಡಿಒ ಸೇವೆಯಿಂದ ವಜಾಗೊಳಿಸಿದೆ.

ವರ್ಚುಯಲ್ ನಲ್ಲಿ ಹನಿಟ್ರ್ಯಾಪ್  ಬಲೆಗೆ ಬಿದ್ದು, ಶಂಕಿತ ಪಾಕಿಸ್ತಾನಿ ಗೂಢಚಾರರಿಗೆ ಮಾಹಿತಿ ಸೋರಿಕೆ ಮಾಡಿರುವುದು ತನಿಖೆಯಿಂದ ತಿಳಿದುಬಂದ ನಂತರ ಹಿರಿಯ ವಿಜ್ಞಾನಿ,  ಪ್ರಯೋಗಾಲಯದ ನಿರ್ದೇಶಕ  ಪ್ರದೀಪ್ ಕುರುಲ್ಕರ್ ಅವರನ್ನು ಡಿಆರ್ ಡಿಒ ಸೇವೆಯಿಂದ ಅಮಾನತುಪಡಿಸಿದೆ. 

ಇದಕ್ಕೂ ಮುನ್ನಾ ದೇಶದ ಗೌಪ್ಯ ಮಾಹಿತಿಗಳನ್ನು ಆಪ್ ಮೂಲಕ ವಿದೇಶಿ ಏಜೆಂಟ್ ಗಳಿಗೆ ಮಾಡಿದ್ದಕ್ಕಾಗಿ ವಿಜ್ಞಾನಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿತ್ತು. ತನಿಖೆಯಲ್ಲಿ ಅವರು ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿರುವುದು  ಕಂಡುಬಂದ ನಂತರ ವಿಜ್ಞಾನಿಯನ್ನು ಪ್ರಯೋಗಾಲಯದ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ಡಿಆರ್‌ಡಿಒ ಹಿರಿಯ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

"ಆನ್‌ಲೈನ್‌ನಲ್ಲಿ ಅವರ ಚಟುವಟಿಕೆಗಳ ಬಗ್ಗೆ ಇತರ ಏಜೆನ್ಸಿಗಳಿಂದ ಮಾಹಿತಿ ಪಡೆದ ನಂತರ ಸಂಸ್ಥೆ ಪುರುಲ್ಕರ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ. ನಾವು ಈಗಾಗಲೇ ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com