ದಕ್ಷಿಣ ಮುಂಬೈ ಫ್ಲಾಟ್ ಗಾಗಿ 8 ದಶಕಗಳ ಹೋರಾಟ: 93 ನೇ ವಯಸ್ಸಿನ ಮಹಿಳೆ ಪರ ಕೋರ್ಟ್ ತೀರ್ಪು

ದಕ್ಷಿಣ ಮುಂಬೈ ಫ್ಲಾಟ್ ಗಾಗಿ 8 ದಶಕಗಳ ಕಾಲ ಹೋರಾಟ ಮಾಡಿದ್ದ ಮಹಿಳೆಯೊಬ್ಬರ ಪರ ಈಗ ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್
Updated on

ಮುಂಬೈ: ದಕ್ಷಿಣ ಮುಂಬೈ ಫ್ಲಾಟ್ ಗಾಗಿ 8 ದಶಕಗಳ ಕಾಲ ಹೋರಾಟ ಮಾಡಿದ್ದ ಮಹಿಳೆಯೊಬ್ಬರ ಪರ ಈಗ ಬಾಂಬೆ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

ದಕ್ಷಿಣ ಮುಂಬೈ ನ ರೂಬಿ ಮ್ಯಾನ್ಷನ್ ನಲ್ಲಿ 93 ವರ್ಷದ ಮಹಿಳೆಯೊಬ್ಬರಿಗೆ ಸೇರಿದ್ದ 2 ಫ್ಲ್ಯಾಟ್ ಗಳಿದ್ದು, 1942 ರಲ್ಲಿ ಜಾರಿಯಲ್ಲಿದ್ದ ಡಿಫೆನ್ಸ್ ಇಂಡಿಯಾ ಕಾಯ್ದೆಯಡಿ (ರಿಕ್ವೆಸಿಷನ್ ಆದೇಶ) ಖಾಸಗಿ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಕ್ಕೆ ಅಂದಿನ ಬ್ರಿಟೀಷ್ ಆಡಳಿತಗಾರರಿಗೆ ಅವಕಾಶವಿದ್ದಾಗ ಈ ಕಟ್ಟಡವನ್ನು ವಶಕ್ಕೆ ಪಡೆಯಲಾಗಿತ್ತು.

1946 ರ ಜುಲೈ ನಲ್ಲಿ ಡಿ-ರಿಕ್ವೆಸಿಷನ್ ಆದೇಶ ಜಾರಿಗೆ ಬಂದಿತ್ತಾದರೂ ಫ್ಲ್ಯಾಟ್ ಗಳನ್ನು ಸಂತ್ರಸ್ತೆ ಆಲಿಸ್ ಡಿಸೋಜಾಗೆ ವಾಪಸ್ ನೀಡಲಾಗಿರಲಿಲ್ಲ. ಪ್ರಸ್ತುತ ಈ ಫ್ಲ್ಯಾಟ್ ಗಳಲ್ಲಿ ಮಾಜಿ ಸರ್ಕಾರಿ ಅಧಿಕಾರಿಗಳ ಕಾನೂನುಬದ್ಧ ಉತ್ತರಾಧಿಕಾರಿಗಳು ವಾಸವಿದ್ದಾರೆ.

1946 ರ ಡಿ-ರಿಕ್ವೆಸಿಷನ್ ಆದೇಶವನ್ನು ಜಾರಿಗೆ ತರುವಂತೆ ಡಿಸೌಜಾ, ಮಹಾರಾಷ್ಟ್ರ ಸರ್ಕಾರ ಹಗೂ ಮುಂಬೈ ನ ಕಲೆಕ್ಟರ್ ಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಈಗ ಫ್ಲ್ಯಾಟ್ ಗಳಲ್ಲಿ ವಾಸವಿರುವ ಮಂದಿ, ಮಹಿಳೆಯ ಅರ್ಜಿಗೆ ವಿರೋಧ ವ್ಯಕ್ತಪಡಿಸಿದ್ದರು. 

93 ವರ್ಷ ವಯಸ್ಸಿನ ಮಹಿಳೆಯರ ಮನವಿಯನ್ನು 1940 ರ ದಶಕದಲ್ಲಿ ರಿಕ್ವಿಸಿಷನ್ ಆರ್ಡರ್ ಅಡಿಯಲ್ಲಿ ಫ್ಲ್ಯಾಟ್ ಗೆ ಸೇರಿಕೊಂಡ ಡಿಎಸ್ ಲಾಡ್ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಾಗಿರುವ ಫ್ಲಾಟ್‌ನ ಪ್ರಸ್ತುತ ನಿವಾಸಿಗಳು ವಿರೋಧಿಸಿದ್ದರು. ಲಾಡ್ ಅಂದಿನ ನಾಗರಿಕ ಸೇವಾ ಇಲಾಖೆಯಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದರು.

ರಿಕ್ವೆಸಿಷನ್ ಆದೇಶವನ್ನು ವಾಪಸ್ ಪಡೆಯಲಾದ ಬಳಿಕ ಕಟ್ಟಡದಲ್ಲಿನ ಇತರ ಫ್ಲ್ಯಾಟ್ ಗಳನ್ನು ಅದರ ಮಾಲಿಕರಿಗೆ ವಾಪಸ್ ನೀಡಲಾಗಿತ್ತು. ಈ ಫ್ಲ್ಯಾಟ್ ನ್ನು ಮಾತ್ರ ಕಾನೂನುಬದ್ಧ ಮಾಲಿಕರಿಗೆ ವಾಪಸ್ ನೀಡಲಾಗಿಲ್ಲ ಎಂದು 93 ವರ್ಷದ ಮಹಿಳೆ ಪರ ವಕೀಲರು ವಾದ ಮಂಡಿಸಿದ್ದರು. ಫ್ಲ್ಯಾಟ್  ನ ಭೌತಿಕ ಸ್ವಾಧೀನವನ್ನು ಮಾಲೀಕರಿಗೆ (ಡಿಸೋಜಾ) ಹಸ್ತಾಂತರಿಸಲಾಗಿಲ್ಲ ಮತ್ತು ಆದ್ದರಿಂದ ಡಿ-ರಿಕ್ವಿಸಿಷನ್ ಪೂರ್ಣಗೊಂಡಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದ್ದು ವೃದ್ಧೆ ಪರ ಆದೇಶ ನೀಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com