ಅನಧಿಕೃತ ಭೇಟಿ: ರಾಹುಲ್ ಗೆ ನೊಟೀಸ್ ಕಳಿಸಲಿರುವ ದೆಹಲಿ ವಿವಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೊಟೀಸ್ ಕಳಿಸಲಿರುವ ದೆಹಲಿ ವಿವಿ ಯಾವುದೇ ಅನಧಿಕೃತ ಭೇಟಿ ನೀಡದಂತೆ ಎಚ್ಚರಿಕೆ ನೀಡಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೆಹಲಿ ವಿವಿ ಹಾಸ್ಟೆಲ್ ನಲ್ಲಿ ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಕೆಲವೇ ದಿನಗಳ ಬೆನ್ನಲ್ಲೇ ದೆಹಲಿ ವಿವಿ ಎಚ್ಚೆತ್ತುಕೊಂಡಿದ್ದು, ನೊಟೀಸ್ ಜಾರಿಗೊಳಿಸಲು ಮುಂದಾಗಿದೆ.
ಮಂಗಳವಾರ ಅಥವಾ ಬುಧವಾರದಂದು ನೊಟೀಸ್ ಜಾರಿಯಾಗುವ ಸಾಧ್ಯತೆ ಇದೆ ಎಂದು ದೆಹಲಿ ವಿವಿ ರಿಜಿಸ್ಟಾರ್ ವಿಕಾಸ್ ಗುಪ್ತಾ ತಿಳಿಸಿದ್ದಾರೆ. ಈ ರೀತಿಯ ಭೇಟಿಯು ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಮತ್ತು ಅಂತಹ ಯಾವುದೇ ಸಂವಹನಕ್ಕಾಗಿ ಸರಿಯಾದ ಶಿಷ್ಟಾಚಾರವನ್ನು ಅನುಸರಿಸುವ ಅಗತ್ಯವಿದೆ ಎಂದು ವಿಶ್ವವಿದ್ಯಾಲಯ, ರಾಹುಲ್ ಗಾಂಧಿಗೆ ತಿಳಿಸುತ್ತದೆ ಎಂದು ವಿಕಾಸ್ ಗುಪ್ತಾ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಶುಕ್ರವಾರ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪುರುಷರ ಹಾಸ್ಟೆಲ್‌ಗೆ ಭೇಟಿ ನೀಡಿದ ಗಾಂಧಿ, ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಅವರೊಂದಿಗೆ ಊಟ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ