ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ: ಉತ್ತರಾಧಿಕಾರಿ ನೇಮಕ ಸಂಬಂಧ ಶಿವಸೇನೆಗೆ ಪವಾರ್ ತಿರುಗೇಟು

ಎನ್ ಸಿ ಪಿ ಪಕ್ಷಕ್ಕೆ ಉತ್ತರಾಧಿಕಾರಿ ನೇಮಕ ಮಾಡುವಲ್ಲಿ ಶರದ್ ಪವಾರ್ ವಿಫಲರಾಗಿದ್ದಾರೆ ಎಂಬ ಶಿವಸೇನೆ ಹೇಳಿಕೆಗೆ ಪಕ್ಷದ ವರಿಷ್ಠ ಶರದ್ ಪವಾರ್ ಕಿಡಿ ಕಾರಿದ್ದಾರೆ.
ಶರದ್ ಪವಾರ್
ಶರದ್ ಪವಾರ್
Updated on

ಪುಣೆ: ಎನ್ ಸಿ ಪಿ ಪಕ್ಷಕ್ಕೆ ಉತ್ತರಾಧಿಕಾರಿ ನೇಮಕ ಮಾಡುವಲ್ಲಿ ಶರದ್ ಪವಾರ್ ವಿಫಲರಾಗಿದ್ದಾರೆ ಎಂಬ ಶಿವಸೇನೆ ಹೇಳಿಕೆಗೆ ಪಕ್ಷದ ವರಿಷ್ಠ ಶರದ್ ಪವಾರ್ ಕಿಡಿ ಕಾರಿದ್ದಾರೆ.

ನಾನು ಮತ್ತು ನನ್ನ ಪಕ್ಷದ ನಾಯಕರು ಬೇರೆಯವರು  ಏನು ಹೇಳುತ್ತಾರೆ ಎಂಬ ಬಗ್ಗೆ ನಾವು ಗಮನ ಕೊಡುವುದಿಲ್ಲ, ಜೊತೆಗೆ ಅಂತಹ ಲೇಖನಗಳಿಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ.

ಮಂಗಳವಾರದ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಎನ್‌ಸಿಪಿಯಲ್ಲಿರುವ ಪ್ರತಿಯೊಬ್ಬರಿಗೂ ಪಕ್ಷವನ್ನು ಹೇಗೆ ಮುನ್ನಡೆಸಬೇಕೆಂದು ತಿಳಿದಿದೆ ಮತ್ತು ಪಕ್ಷದಲ್ಲಿ ಹೊಸ ನಾಯಕತ್ವವನ್ನು ಹೇಗೆ ರಚಿಸಬೇಕು ಎಂಬುದು ಅವರಿಗೆ ತಿಳಿದಿದೆ. ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ' ಸಂಪಾದಕೀಯದಲ್ಲಿ ಪವಾರ್ ಅವರು ತಮ್ಮ ಪಕ್ಷವನ್ನು ಮುನ್ನಡೆಸುವ ಉತ್ತರಾಧಿಕಾರಿಯನ್ನು ರಚಿಸಲು ವಿಫಲರಾಗಿದ್ದಾರೆ ಎಂದು ಬರೆಯಲಾಗಿತ್ತು.

ಪವಾರ್ ರಾಜೀನಾಮೆ ನೀಡುವ ನಿರ್ಧಾರವನ್ನು ಘೋಷಿಸಿದ ನಂತರ ಎನ್‌ಸಿಪಿಯ ಹೊಸ ಅಧ್ಯಕ್ಷರನ್ನು ನಿರ್ಧರಿಸಲು ರಚಿಸಲಾದ ಜಂಬೋ ಸಮಿತಿಯು ಆಡಳಿತಾರೂಢ ಭಾರತೀಯ ಜನತಾ ಪಕ್ಷದೊಂದಿಗೆ ಹೋಗಲು ಉತ್ಸುಕರಾಗಿರುವ ಕೆಲವು ಸದಸ್ಯರನ್ನು ಒಳಗೊಂಡಿತ್ತು. ಆದರೆ ಎನ್‌ಸಿಪಿ ಕಾರ್ಯಕರ್ತರ ಒತ್ತಡದಿಂದಾಗಿ ಈ ಸದಸ್ಯರು ಪವಾರ್ ಅವರನ್ನು ಮುಂದುವರಿಸುವಂತೆ ಒತ್ತಾಯಿಸಿದ್ದಾರೆ ಎಂದು ಹೇಳಿದೆ.

ಸಾಮ್ನಾದಲ್ಲಿ ಬರೆದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪವಾರ್, "ನಾವು ಹೊಸ ನಾಯಕತ್ವವನ್ನು ರಚಿಸುತ್ತೇವೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾರಾದರೂ ಬರೆಯುತ್ತಿದ್ದರೆ ನಾವು ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಅದು ಅವರ ವಿಶೇಷ (ಬರೆಯುವುದು) ಆದರೆ ನಾವು ಅದನ್ನು ನಿರ್ಲಕ್ಷಿಸುತ್ತೇವೆ, ನಾವು ಏನು ಮಾಡುತ್ತಿದ್ದೇವೆಂದು ನಮಗೆ ತಿಳಿದಿದೆ,  ನಾವು ಮಾಡುತ್ತಿರುವುದರಲ್ಲಿ ತೃಪ್ತರಾಗಿದ್ದೇವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com