ಸಿಬಿಎಸ್ ಇ 10ನೇ ತರಗತಿ ಪರೀಕ್ಷೆ: ಶೇ.95.2 ರಷ್ಟು ಅಂಕ ಪಡೆದ ಆ್ಯಸಿಡ್​ ದಾಳಿ ಸಂತ್ರಸ್ತೆ!

ಯಶಸ್ಸಿಗೆ ಯಾವುದೇ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಚಂಡೀಗಢದ ಈ ಬಾಲಕಿಯೇ ಸಾಕ್ಷಿ. ಹೌದು, ಆ್ಯಸಿಡ್​ ದಾಳಿಯಿಂದ ಬದುಳಿದಿರುವ 15 ವರ್ಷದ ಕೈಫಿ ಶುಕ್ರವಾರ ಪ್ರಕಟವಾದ ಸಿಬಿಎಸ್ ಇ 10 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 95.2% ಅಂಕಗಳಿಸುವ ಮೂಲಕ ಶಾಲೆಗೆ ಟಾಪರ್ ಆಗಿದ್ದಾರೆ.
ಆ್ಯಸಿಡ್ ದಾಳಿ ಸಂತ್ರಸ್ತೆ ಕೈಫಿ
ಆ್ಯಸಿಡ್ ದಾಳಿ ಸಂತ್ರಸ್ತೆ ಕೈಫಿ

ಚಂಡೀಗಢ: ಯಶಸ್ಸಿಗೆ ಯಾವುದೇ ಅಂಗವೈಕಲ್ಯ ಅಡ್ಡಿಯಾಗದು ಎಂಬುದಕ್ಕೆ ಚಂಡೀಗಢದ ಈ ಬಾಲಕಿಯೇ ಸಾಕ್ಷಿ. ಹೌದು, ಆ್ಯಸಿಡ್​ ದಾಳಿಯಿಂದ ಬದುಳಿದಿರುವ 15 ವರ್ಷದ ಕೈಫಿ ಶುಕ್ರವಾರ ಪ್ರಕಟವಾದ ಸಿಬಿಎಸ್ ಇ 10 ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 95.2% ಅಂಕಗಳಿಸುವ ಮೂಲಕ ಶಾಲೆಗೆ ಟಾಪರ್ ಆಗಿದ್ದಾರೆ.

ಹಿಸಾರ್‌ನ ಹಳ್ಳಿಯೊಂದರಲ್ಲಿ ಮೂವರು ಕಿರಾತಕರು ಆಕೆಯ ಮೇಲೆ ಆಸಿಡ್ ಎಸೆದಾಗ ಕೇವಲ ಮೂರು ವರ್ಷ. ಪೋಷಕರಾದ ಪವನ್ ಮತ್ತು ಸುಮನ್ ಚಿಕಿತ್ಸೆಗಾಗಿ ದೂರದ ಆಸ್ಪತ್ರೆಗೆ ಕರೆದೊಯ್ದರೂ  ಆಕೆ ದೃಷ್ಟಿ ಕಳೆದುಕೊಂಡಳು.

ಈ ಹೀನ ಕೃತ್ಯವೆಸಗಿದ್ದ ಮೂವರು ಮಧ್ಯ ವಯಸ್ಸಿನ ಅಪರಾಧಿಗಳು ಕೇವಲ ಎರಡು ವರ್ಷಗಳಲ್ಲಿ ಜೈಲಿನಿಂದ ಹೊರಬಂದರು. ಆದರೆ, ಆಕೆಯ ಕಣ್ಣು ಮಾತ್ರ ವಾಪಸ್ ಬರಲಿಲ್ಲ. ಆದಾಗ್ಯೂ, ಆಕೆಯ ಉತ್ತಮ ಶಿಕ್ಷಣಕ್ಕಾಗಿ ಹಳ್ಳಿಯಿಂದ ಚಂಡೀಗಢಕ್ಕೆ ಕುಟುಂಬ ಸ್ಥಳಾಂತರವಾಗಿದೆ. ಆಕೆಯ ತಂದೆ ಹರಿಯಾಣದ ಸಚಿವಾಲಯದಲ್ಲಿ ಡಿ ದರ್ಜೆಯ ನೌಕರರಾಗಿದ್ದಾರೆ. 

"ವೀಡಿಯೋಗಳು ಮತ್ತು ಮಲ್ಟಿಮೀಡಿಯಾಗಳು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಉತ್ತಮ ನೆರವಾಗಿವೆ. ನನ್ನ ಕುಟುಂಬ ಮತ್ತು ಶಿಕ್ಷಕರ ಬೆಂಬಲದಿಂದ ಉತ್ತಮ ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಮುಂದೆ ಐಎಎಸ್ ಮಾಡಿ ದೇಶ ಸೇವೆ ಮಾಡುವುದು ಕೈಫಿಯ ಗುರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com