ಲಖನೌ: ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಮತ್ತು ಅವರ ಆಪ್ತ ಸಹಾಯಕರಾದ ಗುಡ್ಡು ಮುಸ್ಲಿಂ ಮತ್ತು ಸಬೀರ್ ವಿರುದ್ಧ ಪ್ರಯಾಗರಾಜ್ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೈಸ್ತಾ ಪರ್ವೀನ್ ಪತ್ತೆಗಾಗಿ 50,000 ರೂಪಾಯಿ ಬಹುಮಾನವನ್ನು ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಘೋಷಿಸಿದ್ದಾರೆ. ಪ್ರಯತ್ನಪಟ್ಟರೂ ಪರ್ವೀನ್ ಮತ್ತು ಇತರ ಇಬ್ಬರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರು ದೇಶದಿಂದ ಓಡಿಹೋಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದರಿಂದಾಗಿ ಮೂವರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಪ್ರಯಾಗ್‌ರಾಜ್ ಪೊಲೀಸರು ಈ ಹಿಂದೆ ಉತ್ತರ ಪ್ರದೇಶ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಇದರ ಆಧಾರದ ಮೇಲೆ ದೇಶ ತೊರೆಯದಂತೆ ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ. ನೋಟೀಸ್ ಅವಧಿಯು 1 ವರ್ಷ ಇರುತ್ತದೆ.
Advertisement