ನೂತನ ಸಂಸತ್ತು ಭವನ ಉದ್ಘಾಟನೆ, ತಮಿಳು ನಾಡಿನ 20 ಮಂದಿ ಅರ್ಚಕರಿಂದ ಧಾರ್ಮಿಕ ವಿಧಿವಿಧಾನ

ಇದೇ ಮೇ 28 ರಂದು ಹೊಸ ಸಂಸತ್ ಭವನದ ಉದ್ಘಾಟನೆಗೆ ತಮಿಳುನಾಡಿನಿಂದ 20 ಮಂದಿ ಅರ್ಚಕರನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬ್ರಿಟಿಷರಿಂದ 1947ರಲ್ಲಿ ಅಧಿಕಾರ ಹಸ್ತಾಂತರದ ಪ್ರತೀಕವಾಗಿದ್ದ ಸೆಂಗೋಲ್ ನ್ನು ಅಂದು ಸ್ಥಾಪಿಸಲಾಗುವುದು ಎಂದು ಹೇಳಿದರು. 
ನೂತನ ಸಂಸತ್ತು ಭವನದ ಪಕ್ಷಿನೋಟ
ನೂತನ ಸಂಸತ್ತು ಭವನದ ಪಕ್ಷಿನೋಟ
Updated on

ನವದೆಹಲಿ: ಇದೇ ಮೇ 28 ರಂದು ಹೊಸ ಸಂಸತ್ ಭವನದ ಉದ್ಘಾಟನೆಗೆ ತಮಿಳುನಾಡಿನಿಂದ 20 ಮಂದಿ ಅರ್ಚಕರನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬ್ರಿಟಿಷರಿಂದ 1947ರಲ್ಲಿ ಅಧಿಕಾರ ಹಸ್ತಾಂತರದ ಪ್ರತೀಕವಾಗಿದ್ದ ಸೆಂಗೋಲ್ ನ್ನು ಅಂದು ಸ್ಥಾಪಿಸಲಾಗುವುದು ಎಂದು ಹೇಳಿದರು. 

ತಮಿಳುನಾಡು, ತೆಲಂಗಾಣ ಮತ್ತು ನಾಗಾಲ್ಯಾಂಡ್ ರಾಜ್ಯಪಾಲರೊಂದಿಗೆ ಚೆನ್ನೈನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರ ಹಸ್ತಾಂತರವನ್ನು ಸಂಕೇತಿಸುವ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಸೆಂಗೋಲ್ ರಾಜದಂಡ ಹಸ್ತಾಂತರಿಸುವ ಸಂಚಿಕೆಯಲ್ಲಿ ತಮಿಳುನಾಡಿಗೆ ದೊಡ್ಡ ಹೆಮ್ಮೆಯ ಭಾಗ ಇದೆ ಎಂದು ಹೇಳಿದರು.

1947 ರಲ್ಲಿ ಬ್ರಿಟಿಷರಿಂದ ಭಾರತದ ಜನತೆಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ದಿವಂಗತ ಸಿಆರ್ ರಾಜಗೋಪಾಲಾಚಾರಿ ಅವರು ನೆಹರು ಅವರ ಸಮಾಲೋಚನೆಯ ನಂತರ ಶೈವ ಮಠಾಧೀಶರೊಂದಿಗೆ ಚರ್ಚಿಸಿ ತಿರುವವಡುತುರೈ ಅಧೀನಂ ಅವರ ಸಲಹೆಯ ಮೇರೆಗೆ ಮಾಡಲಾಗಿತ್ತು ಎಂದರು. 

ಮೇ 28 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಸಂದರ್ಭದಲ್ಲಿ ಹೊಸ ಸಂಸತ್ತಿನ ಕಟ್ಟಡದಲ್ಲಿ ಸೆಂಗೋಲ್ ನ್ನು ಸ್ಥಾಪಿಸಲಾಗುವುದು, ಈ ಕಾರ್ಯಕ್ರಮಕ್ಕೆ ತಿರುವವಾಡುತುರೈ, ಪೇರೂರ್ ಮತ್ತು ಮಧುರೈ ಸೇರಿದಂತೆ ತಮಿಳುನಾಡಿನ 20 ಅರ್ಚಕರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು. 

ತಮಿಳಿನಲ್ಲಿ, 'ಆದೀನಂ' ಎಂಬ ಪದವು ಶೈವ ಮಠ ಮತ್ತು ಮಠದ ಮುಖ್ಯಸ್ಥ ಎರಡನ್ನೂ ಸೂಚಿಸುತ್ತದೆ. ಮಠಾಧೀಶರು ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ, ತೇವರಂನ್ನು ಪಠಿಸುವ ಓದುವರ್‌ಗಳು (ಶೈವ ಧರ್ಮಗ್ರಂಥಗಳು ಮತ್ತು ಸ್ತೋತ್ರಗಳಲ್ಲಿ ವಿದ್ವಾಂಸರು) ಇರುತ್ತಾರೆ. 1947 ರಲ್ಲಿ ಓತುವರ್ಗಳು ಕೋಲಾರು ಪಥಿಗಂನ್ನು ಪಠಿಸಿದಾಗ ಸೆಂಗೋಲನ್ನು ನೆಹರೂಗೆ ಹಸ್ತಾಂತರಿಸಲಾಯಿತು ಎಂದರು. 

ಅದೇ ಸೆಂಗೋಲನ್ನು ಲೋಕಸಭೆಯ ಸ್ಪೀಕರ್ ಕುರ್ಚಿಯ ಬಳಿ ಅತ್ಯಂತ ಗೌರವದಿಂದ ಸ್ಥಾಪಿಸಲಾಗುವುದು. ಇದು "ನ್ಯಾಯದೊಂದಿಗೆ ಮತ್ತು ಯಾವುದೇ ಪಕ್ಷಪಾತವಿಲ್ಲದೆ ಆಡಳಿತವನ್ನು" ಸಂಕೇತಿಸುತ್ತದೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com