ಪ್ರಧಾನಿ ಮೋದಿ ನೂತನ ಸಂಸತ್ ಭವನ ಉದ್ಘಾಟನೆ ವಿರೋಧಿಸಿ ಜೆಡಿಯುನಿಂದ ಉಪವಾಸ ಸತ್ಯಾಗ್ರಹ

ಪ್ರಧಾನಿ ನರೇಂದ್ರ ಮೋದಿಯಿಂದ ನೂತನ ಸಂಸತ್ ಭವನ ಉದ್ಘಾಟನೆ ವಿರೋಧಿಸಿ ಭಾನುವಾರ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ-ಯುನೈಟೆಡ್...
ನೂತನ ಪಾರ್ಲಿಮೆಂಟ್ ಕಟ್ಟಡ
ನೂತನ ಪಾರ್ಲಿಮೆಂಟ್ ಕಟ್ಟಡ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯಿಂದ ನೂತನ ಸಂಸತ್ ಭವನ ಉದ್ಘಾಟನೆ ವಿರೋಧಿಸಿ ಭಾನುವಾರ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾ ದಳ-ಯುನೈಟೆಡ್(ಜೆಡಿಯು) ಶುಕ್ರವಾರ ಘೋಷಿಸಿದೆ.

'ದೇಶದ ಮೇಲೆ ಮೋದಿ ಸಂವಿಧಾನ ಹೇರುವ' ಪ್ರಯತ್ನಗಳ ಬಗ್ಗೆ ತಮ್ಮ ಪಕ್ಷ ಆಕ್ರೋಶಗೊಂಡಿದೆ ಎಂದು ಜೆಡಿ-ಯು ರಾಜ್ಯಾಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹಾ ಅವರು ಹೇಳಿದ್ದಾರೆ.

"ಈ ಸರ್ಕಾರ ತುಳಿತಕ್ಕೊಳಗಾದ ವರ್ಗಕ್ಕೆ ಸೇರಿದ ರಾಷ್ಟ್ರಪತಿಗಳನ್ನು ಅವಮಾನಿಸುತ್ತಿದೆ. ಹೊಸ ಕಟ್ಟಡದ ಶಂಕುಸ್ಥಾಪನೆ ಸಮಾರಂಭಕ್ಕೂ ಅಂದಿನ ದಲಿತ ರಾಷ್ಟ್ರಪತಿಯನ್ನು ಆಹ್ವಾನಿಸಲಿಲ್ಲ" ಎಂದು ಕುಶ್ವಾಹಾ ಅವರು ರಾಮ್ ನಾಥ್ ಕೋವಿಂದ್ ಅವರನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. .

ಈಗ ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಿದ್ದು, ಅವರಿಗೂ ಇದೇ ರೀತಿ ಅವಮಾನ ಮಾಡಲಾಗುತ್ತಿದೆ, ಇದನ್ನು ಜೆಡಿಯು ಸಹಿಸುವುದಿಲ್ಲ ಎಂದಿದ್ದಾರೆ.

ನೂತನ ಸಂಸತ್ ಭವನ ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನಿಸಬೇಕಿತ್ತು ಎಂದಿರುವ ಸುಮಾರು 20ಕ್ಕೂ ಹೆಚ್ಚು ಪ್ರತಿಪಕ್ಷಗಳು, ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com