ಮುಂಬೈ ಸ್ಟೋರ್ ನಿಂದ 5.62 ಕೋಟಿ ರೂಪಾಯಿ ಮೌಲ್ಯದ ವಜ್ರಗಳು; ಇಬ್ಬರು ಸಿಬ್ಬಂದಿಗಳು ಸೇರಿ ಮೂವರ ಬಂಧನ

ಮುಂಬೈ ನ ಅಂಗಡಿಯೊಂದರಲ್ಲಿ 5.62 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಕಳ್ಳತನ ಮಾಡಲಾಗಿದ್ದು, ಅಂಗಡಿಯ ಇಬ್ಬರು ಸಿಬ್ಬಂದಿಗಳು ಸೇರಿ ಮೂವರನ್ನು ಬಂಧಿಸಿದ್ದಾರೆ.
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)
ಆರೋಪಿ ಬಂಧನ (ಸಾಂದರ್ಭಿಕ ಚಿತ್ರ)

ಮುಂಬೈ: ಮುಂಬೈ ನ ಅಂಗಡಿಯೊಂದರಲ್ಲಿ 5.62 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ಕಳ್ಳತನ ಮಾಡಲಾಗಿದ್ದು, ಅಂಗಡಿಯ ಇಬ್ಬರು ಸಿಬ್ಬಂದಿಗಳು ಸೇರಿ ಮೂವರನ್ನು ಬಂಧಿಸಿದ್ದಾರೆ.

ಜೆಬಿ& ಬ್ರದರ್ಸ್ ಪ್ರೈವೆಟ್ ಲಿಮಿಟೆಡ್ ನಿರ್ದೇಶಕರಲ್ಲಿ ಓರ್ವರಾದ ಸಂಜಯ್ ಶಾ, ಪೊಲೀಸರನ್ನು ಸಂಪರ್ಕಿಸಿ, 5.62 ಕೋಟಿ ಮೌಲ್ಯದ ವಜ್ರಗಳು ನಾಪತ್ತೆಯಾಗಿವೆ ಎಂದು ದೂರು ನೀಡಿದ್ದರು.

ದೂರುದಾರರು ಸಂಸ್ಥೆಯ ನೌಕರರಾದ ಪ್ರಶಾಂತ್ ಶಾ, ವಿಶಾಲ್ ಶಾ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿ, ಏಪ್ರಿಲ್ ನಿಂದ ವಜ್ರಗಳನ್ನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿದ್ದರು.

ಸಂಸ್ಥೆಯ ಮಾಜಿ ಉದ್ಯೋಗಿ ನೀಲೇಶ್ ಶಾ, ಕದ್ದ ವಜ್ರಗಳನ್ನು ಮಾರಾಟ ಮಾಡಲು ಇಬ್ಬರಿಗೆ ಸಹಾಯ ಮಾಡಿದ್ದಾರೆ ಎಂದು ಎಫ್‌ಐಆರ್ ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು 420 (ವಂಚನೆ) ಸೇರಿದಂತೆ ಸಂಬಂಧಿತ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com