ಆಪಲ್ ಭದ್ರತಾ ಎಚ್ಚರಿಕೆ ಕುರಿತು ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದ ಮಹುವಾ; ರಕ್ಷಣೆ ನೀಡುವಂತೆ ಮನವಿ

ತಮ್ಮ ಐಫೋನ್‌ಗಳ ಮೇಲೆ "ಸರ್ಕಾರಿ ಪ್ರಾಯೋಜಿತ" ದಾಳಿಗಳ ಕುರಿತು ಆಪಲ್ ಕಂಪನಿ ವಿರೋಧ ಪಕ್ಷದ ಸಂಸದರಿಗೆ ಭದ್ರತಾ ಎಚ್ಚರಿಕೆಗಳ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ...
ಮೆಹುವಾ ಮೊಯಿತ್ರಾ
ಮೆಹುವಾ ಮೊಯಿತ್ರಾ
Updated on

ನವದೆಹಲಿ: ತಮ್ಮ ಐಫೋನ್‌ಗಳ ಮೇಲೆ "ಸರ್ಕಾರಿ ಪ್ರಾಯೋಜಿತ" ದಾಳಿಗಳ ಕುರಿತು ಆಪಲ್ ಕಂಪನಿ ವಿರೋಧ ಪಕ್ಷದ ಸಂಸದರಿಗೆ ಭದ್ರತಾ ಎಚ್ಚರಿಕೆಗಳ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ ಮತ್ತು ತಮ್ಮ ಕರ್ತವ್ಯಗಳನ್ನು ಮುಂದುವರಿಸಲು ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

"ಸರ್ಕಾರದ ಈ  ಕಾನೂನುಬಾಹಿರ ಕಣ್ಗಾವಲು" ಸಂವಿಧಾನ ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಮೇಲಿನ ಅತ್ಯಂತ ಕೆಟ್ಟ ದಾಳಿಯಾಗಿದೆ ಎಂದು ಕೃಷ್ಣನಗರ ಸಂಸದೆ ಹೇಳಿದ್ದಾರೆ.

ಬಿರ್ಲಾಗೆ ಬರೆದ ಪತ್ರದಲ್ಲಿ, ಮೊಯಿತ್ರಾ ಅವರು "ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಅನ್ನು ಗುರಿಯಾಗಿಸಬಹುದು" ಎಂಬ ಸಂದೇಶವನ್ನು ವಿರೋಧ ಪಕ್ಷದ ನಾಯಕರು ಸ್ವೀಕರಿಸಿದ್ದಾರೆ. ಅವರು ನಿಮ್ಮ ಸೂಕ್ಷ್ಮ ಸಂವಹನಕ್ಕೆ ಸಂಬಂಧಿಸಿದ ಡೇಟಾ, ಕ್ಯಾಮರಾ ಅಥವಾ ಮೈಕ್ರೊಫೋನ್‌ಗಳನ್ನು ಸಹ ದೂರದಿಂದಲೇ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಚ್ಚರಿಸಿರುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗಳನ್ನು ಹ್ಯಾಕ್ ಮಾಡಬಹುದು ಎಂದು ತಂತ್ರಜ್ಞಾನ ಕಂಪನಿ ಆಪಲ್ ಮಂಗಳವಾರ ಪ್ರತಿಪಕ್ಷಗಳ ಐವರು ಸಂಸದರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅದನ್ನು ವಿರೋಧ ಪಕ್ಷಗಳು ಸಂಸದರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಟಿಎಂಸಿಯ ಮಹುವಾ ಮೊಯಿತ್ರಾ, ಶಿವಸೇನೆಯ(ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಮತ್ತು ಎಎಪಿಯ ರಾಘವ್ ಚಡ್ಡಾ, ಕಾಂಗ್ರೆಸ್ ನಾಯಕ ಶಾಹಿ ತರೂರ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರು ಆಪಲ್‌ನಿಂದ ಈ ರೀತಿಯ ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಮತ್ತು ಈ ಸಂಬಂಧ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com