ತೆಲಂಗಾಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಈ ವರೆಗೂ 427 ಕೋಟಿ ರೂಪಾಯಿ ವಶಕ್ಕೆ 

ಚುನಾವಣಾ ಕಣವಾಗಿರುವ ತೆಲಂಗಾಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಭಾಗವಾಗಿ ಈ ವರೆಗೂ ವಶಕ್ಕೆ ಪಡೆದಿರುವ ಮೊತ್ತ 427 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ತೆಲಂಗಾಣ
ತೆಲಂಗಾಣ

ನವದೆಹಲಿ: ಚುನಾವಣಾ ಕಣವಾಗಿರುವ ತೆಲಂಗಾಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಭಾಗವಾಗಿ ಈ ವರೆಗೂ ವಶಕ್ಕೆ ಪಡೆದಿರುವ ಮೊತ್ತ 427 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಅ.09 ರಿಂದ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ಒಟ್ಟು 151.5 ಕೋಟಿ ರೂಪಾಯಿ ನಗದು, 263.7 ಕೆಜಿ ಚಿನ್ನ, 1091 ಕೆಜಿ ಬೆಳ್ಳಿ ಮತ್ತು 165.2 ಕೋಟಿ ರೂ.ಗೂ ಹೆಚ್ಚು ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಜೊತೆಗೆ 44.9 ಕೋಟಿ ರೂಪಾಯಿ ಮೌಲ್ಯದ ಮದ್ಯ, 23.3 ಕೋಟಿ ಮೌಲ್ಯದ ಗಾಂಜಾ ಮತ್ತು 42 ಕೋಟಿ ರೂಪಾಯಿ ಮೌಲ್ಯದ ಇತರ ವಸ್ತುಗಳು/ಉಚಿತ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ  ಸಿಇಒ ಕಚೇರಿಯ ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ.a

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com