ಲಾಸ್ ಏಜಂಲೀಸ್: ಹಾಲೋವಿನ್ ಪಾರ್ಟಿ ವೇಳೆ ಗೆಳತಿಗೆ ಪ್ರಪೋಸ್ ಮಾಡುವ ಮೂಲಕ ಉದ್ಯಮಿ ವಿಜಯ್ ಮಲ್ಯ ಮಗ ಸಿದ್ದಾರ್ಥ್ ಮಲ್ಯ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಈ ವಿಷಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಜಯ್ ಮಲ್ಯ ಪುತ್ರ ಸಿದ್ದಾರ್ಥ್ ಮಲ್ಯ ತನ್ನ ಗೆಳತಿ ಜೊತೆ ಎಂಗೇಜ್ ಮೆಂಟ್ ಆಗಿರುವ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸಿದ್ದಾರ್ಥ್ ಮಲ್ಯ ಗರ್ಲ್ ಫ್ರೆಂಡ್ ಜಾಸ್ಮಿನ್ ಅವರಿಗೆ ತನ್ನ ಪ್ರೇಮ ನಿವೇದನೆ ಮಾಡುವ ಹಾಗೆ ಮೊಣಕಾಲಿನಲ್ಲಿ ಕೂತು ಎಂಗೇಜ್ ಮೆಂಟ್ ರಿಂಗ್ ತೋರಿಸಿ, ಅದನ್ನು ಜಾಸ್ಮಿನ್ ಅವರ ಕೈಗೆ ಹಾಕಿದ್ದಾರೆ. ಆ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹ್ಯಾಲೋವೀನ್ ಪಾರ್ಟಿಯೊಂದರಲ್ಲಿ ಸಿದ್ದಾರ್ಥ್ ಮಲ್ಯ ಎಂಗೇಜ್ ಆಗಿದ್ದಾರೆ. ಈ ಕುರಿತ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿದ್ದಾರ್ಥ್ ಪ್ರೀತಿಗೆ ಜಾಸ್ಮಿನ್ ಒಪ್ಪಿಗೆ ಸೂಚಿಸಿದ್ದು, ಉಂಗುರ ಬದಲಾಯಿಸಿಕೊಂಡಿದ್ದಾರೆ.
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿರುವ ಸಿದ್ದಾರ್ಥ್, ಲಂಡನ್ ಮತ್ತು ದುಬೈನಲ್ಲಿ ಹೆಚ್ಚಿನ ಸಮಯ ಕಳೆದಿದ್ದರು. ಲಂಡನ್‌ನ ವೆಲ್ಲಿಂಗ್‌ಟನ್ ಕಾಲೇಜು ಮತ್ತು ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಸಿದ್ದಾರ್ಥ್ ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮ ಕಾಲೇಜಿನಲ್ಲಿಯೂ ಅಧ್ಯಯನ ಮಾಡಿದ್ದರು.
Advertisement