ವಾರಾಣಸಿ: ಐಐಟಿ- ಬನಾರಸ್ ಹಿಂದೂ ವಿವಿ ವಿದ್ಯಾರ್ಥಿನಿಗೆ ಮುತ್ತಿಟ್ಟು ಕಿರುಕುಳ; ವಿವಸ್ತ್ರಗೊಳಿಸಿ ವಿಡಿಯೋ ಶೂಟ್!

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ (ಐಐಟಿ-ಬಿಎಚ್‌ಯು) ವಿದ್ಯಾರ್ಥಿನಿಯನ್ನು ಬುಧವಾರ ರಾತ್ರಿ ಕ್ಯಾಂಪಸ್‌ನೊಳಗೆ ಮೂವರು ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಚುಂಬಿಸಿದ್ದಾರೆ ಮತ್ತು ವಿವಸ್ತ್ರಗೊಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಕ್ನೋ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ (ಐಐಟಿ-ಬಿಎಚ್‌ಯು) ವಿದ್ಯಾರ್ಥಿನಿಯನ್ನು ಬುಧವಾರ ರಾತ್ರಿ ಕ್ಯಾಂಪಸ್‌ನೊಳಗೆ ಮೂವರು ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಚುಂಬಿಸಿದ್ದಾರೆ ಮತ್ತು ವಿವಸ್ತ್ರಗೊಳಿಸಿದ್ದಾರೆ.

ಇಲ್ಲಿನ ಹಾಸ್ಟೆಲ್ ಬಳಿ ಬೈಕಿನಲ್ಲಿ ಬಂದ ಮೂವರು ವ್ಯಕ್ತಿಗಳು ವಿವಸ್ತ್ರಗೊಳಿಸಿ ಕಿರುಕುಳ ನೀಡಿ, ಕೃತ್ಯವನ್ನು ವಿಡಿಯೊ ಸಹ ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ

ವರದಿಗಳ ಪ್ರಕಾರ, ವಿದ್ಯಾರ್ಥಿನಿಯು ತನ್ನ ಹಾಸ್ಟೆಲ್‌ನಿಂದ, ಸ್ನೇಹಿತನೊಂದಿಗೆ ಬುಧವಾರ ರಾತ್ರಿ ಹೊರಗಡೆ ಬಂದಿದ್ದಾಗ ಈ ಘಟನೆ ನಡೆದಿದೆ.

ಸಂತ್ರಸ್ತೆಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ‘ಬೈಕಿನಲ್ಲಿ ಬಂದ ಮೂವರು ಯುವಕರು ನಮ್ಮನ್ನು ಅಡ್ಡಗಟ್ಟಿ, ಕಿರುಚದಂತೆ ಬಾಯಿ ಅದುಮಿ ಹಿಡಿದರು. ಸ್ನೇಹಿತನಿಂದ ನನ್ನನ್ನು ಬೇರೆ ಮಾಡಿ, ದೂರಕ್ಕೆ ಎಳೆದುಕೊಂಡು ಹೋದರು. ದೇವಸ್ಥಾನದ ಸಮೀಪದ ನಿರ್ಜನ ಸ್ಥಳದಲ್ಲಿ ವಿವಸ್ತ್ರಗೊಳಿಸಿ, ಕಿರುಕುಳ ನೀಡಿದರು. ಫೋಟೊ ತೆಗೆದು, ವಿಡಿಯೊ ಮಾಡಿಕೊಂಡರು ಎಂದು ತಿಳಿಸಿದ್ದಾರೆ.

ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಲಂಕಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆದಿದೆ ಎಂದು ವಾರಾಣಸಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಘಟನೆ ನಂತರ ಬಿಎಚ್‌ಯು ಆಡಳಿತವು ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕ್ಯಾಂಪಸ್‌ಗೆ ಹೊರಗಿನವರ ಪ್ರವೇಶ ನಿಷೇಧಿಸಿದೆ ಎಂದು ವರದಿಗಳು ತಿಳಿಸಿವೆ, ಮೂವರು ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಬಿ), 506 ಮತ್ತು ಐಟಿ ಕಾಯ್ದೆಯ 66 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಿಎಚ್‌ಯುನ ನೂರಾರು ವಿದ್ಯಾರ್ಥಿಗಳು ಘಟನೆ ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಘಟನೆಯಲ್ಲಿ ಹೊರಗಿನ ದುಷ್ಕರ್ಮಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ವಿ.ವಿ ಕ್ಯಾಂಪಸ್‌ಗೆ ಹೊರಗಿನವರ ಪ್ರವೇಶ ನಿಷೇಧಿಸಬೇಕು. ಕ್ಯಾಂಪಸ್‌ ಆವರಣದಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಬೇಕು. ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com