ವರ್ಲ್ಡ್ ಫುಡ್ ಇಂಡಿಯಾ 2023: ಕೊಯ್ಲಿನ ನಂತರದ ನಷ್ಟ ಮತ್ತು ಆಹಾರ ಪೋಲಾಗುವುದನ್ನು ನಿಯಂತ್ರಿಸಬೇಕು ಎಂದ ಪ್ರಧಾನಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿಯ ಭಾರತ್ ಮಂಟಪದಲ್ಲಿ ಬೃಹತ್ ಆಹಾರ ಮೇಳ 'ವರ್ಲ್ಡ್ ಫುಡ್ ಇಂಡಿಯಾ 2023' ರ ಎರಡನೇ ಆವೃತ್ತಿಯನ್ನು ಉದ್ಘಾಟಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರ ರಾಜಧಾನಿ ದೆಹಲಿಯ ಭಾರತ್ ಮಂಟಪದಲ್ಲಿ ಬೃಹತ್ ಆಹಾರ ಮೇಳ 'ವರ್ಲ್ಡ್ ಫುಡ್ ಇಂಡಿಯಾ 2023' ರ ಎರಡನೇ ಆವೃತ್ತಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು 1 ಲಕ್ಷಕ್ಕೂ ಅಧಿಕ ಸ್ವಸಹಾಯ ಗುಂಪು (SHG) ಸದಸ್ಯರಿಗೆ 380 ಕೋಟಿ ರೂಪಾಯಿಗಳ ಬೀಜ ಬಂಡವಾಳ ನೆರವು ವಿತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸುಗ್ಗಿಯ ನಂತರದ ಅಂದರೆ ಕೊಯ್ಲು ನಂತರ ನಷ್ಟ ಮತ್ತು ಆಹಾರವನ್ನು ಪೋಲು ಮಾಡುವುದನ್ನು ಕಡಿಮೆ ಮಾಡಿ ಎಂದು ಮನವಿ ಮಾಡಿಕೊಂಡರು. ಭಾರತದ ಆಹಾರ ವೈವಿಧ್ಯತೆಯು ಜಾಗತಿಕ ಹೂಡಿಕೆದಾರರಿಗೆ ಲಾಭಾಂಶವಾಗಿದೆ ಎಂದ ಅವರು, ಆಹಾರ ಸಂಸ್ಕರಣಾ ಉದ್ಯಮವನ್ನು ಮುನ್ನಡೆಸುವ ನೈಸರ್ಗಿಕ ಸಾಮರ್ಥ್ಯವನ್ನು ಭಾರತೀಯ ಮಹಿಳೆಯರು ಹೊಂದಿದ್ದಾರೆ ಎಂದು ಹೇಳಿದರು.

ಸರ್ಕಾರದ ಬೆಂಬಲದಿಂದ ಸುಧಾರಿತ ಪ್ಯಾಕೇಜಿಂಗ್ ಮತ್ತು ಗುಣಮಟ್ಟದ ಉತ್ಪಾದನೆಯ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯಲು ಸ್ವಸಹಾಯ ಗುಂಪುಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿನ ಆಹಾರ ವೈವಿಧ್ಯತೆಯು ಪ್ರತಿ ಜಾಗತಿಕ ಹೂಡಿಕೆದಾರರಿಗೆ ಲಾಭಾಂಶವಾಗಿದೆ. ನಮ್ಮ ಸುಸ್ಥಿರ ಆಹಾರ ಸಂಸ್ಕೃತಿಯು ಸಾವಿರಾರು ವರ್ಷಗಳ ಪ್ರಯೋಗದ ಫಲಿತಾಂಶವಾಗಿದೆ. ಆಹಾರವು ನಮ್ಮ ದೈಹಿಕ ಆರೋಗ್ಯವನ್ನು ರೂಪಿಸುವಲ್ಲಿ ಪಾತ್ರ ವಹಿಸುವುದು ಮಾತ್ರವಲ್ಲದೆ ನಮ್ಮ ಮಾನಸಿಕ ಆರೋಗ್ಯಕ್ಕೂ ಸಹಕಾರಿ ಆಗಿದೆ. ಆಯುರ್ವೇದವು ಸಮತೋಲಿತ ಆಹಾರ, ಆರೋಗ್ಯಕರ ಆಹಾರ ಮತ್ತು ಋತುಗಳಿಗೆ ಅನುಗುಣವಾಗಿ ಆಹಾರ ಪದ್ಧತಿಯನ್ನು ಹೇಳುತ್ತದೆ ಎಂದರು. 

ಆಹಾರ ಸಂಸ್ಕರಣಾ ವಲಯವು ಕಳೆದ 9 ವರ್ಷಗಳಲ್ಲಿ 50,000 ಕೋಟಿ ಎಫ್‌ಡಿಐ ಕಂಡಿದೆ. ಜಿ20ಯಲ್ಲಿನ ಪ್ರತಿನಿಧಿಗಳು ಶ್ರೀ ಅನ್ನ ಆಧಾರಿತ ಆಹಾರವನ್ನು ಸವಿದು ಸಂತೋಷಪಟ್ಟಿದ್ದಾರೆ ಎಂದರು. ಭಾರತದಲ್ಲಿ ಸಂಸ್ಕರಿತ ಆಹಾರ ಉದ್ಯಮವು ಈಗ ಸೂರ್ಯೋದಯ ವಲಯದಂತೆ ಕಾಣುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಈ ವಲಯವು 50,000 ಕೋಟಿ ರೂಪಾಯಿ ವಿದೇಶಿ ಹೂಡಿಕೆ ಕಂಡಿದೆ. ಇದಕ್ಕೆ ಕಾರಣ ಭಾರತ ಸರ್ಕಾರದ ಕೈಗಾರಿಕೆ ಮತ್ತು ರೈತರ ಪರ ನೀತಿಗಳು ಎಂದರು.

ಈ ರುಚಿ ಮತ್ತು ತಂತ್ರಜ್ಞಾನದ ಸಮ್ಮಿಳನವು ಹೊಸ ಭವಿಷ್ಯವನ್ನು ಹುಟ್ಟುಹಾಕುತ್ತದೆ ಮತ್ತು ಹೊಸ ಆರ್ಥಿಕತೆಗೆ ವೇಗವನ್ನು ನೀಡುತ್ತದೆ. ಈ ಬದಲಾಗುತ್ತಿರುವ ಕಾಲದಲ್ಲಿ, 21 ನೇ ಶತಮಾನದಲ್ಲಿ ಆಹಾರ ಭದ್ರತೆಯು ಒಂದು ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿಯೇ ವಿಶ್ವ ಆಹಾರ ಭಾರತದಂತಹ ಘಟನೆಗಳು ಮುಖ್ಯವಾಗಿದೆ ಎಂದರು. 

ಭಾರತವನ್ನು 'ವಿಶ್ವದ ಆಹಾರ ಬುಟ್ಟಿ' ಎಂದು ಪ್ರದರ್ಶಿಸಲು ಮತ್ತು 2023 ನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಆಚರಿಸಲು ಒತ್ತು ನೀಡಲಾಗುತ್ತಿದೆ. 

ವರ್ಲ್ಡ್ ಫುಡ್ ಇಂಡಿಯಾ 2023 ಸರ್ಕಾರಿ ಸಂಸ್ಥೆಗಳು, ರೈತರು, ಉದ್ಯಮಿಗಳು, ಉದ್ಯಮ ವೃತ್ತಿಪರರು ಮತ್ತು ಇತರ ಸಂಬಂಧಪಟ್ಟವರು ಪಾಲುದಾರಿಕೆಯನ್ನು ಸ್ಥಾಪಿಸಲು ಮತ್ತು ಕೃಷಿ-ಆಹಾರ ವಲಯದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಸಂಪರ್ಕಜಾಲ ಮತ್ತು ವ್ಯಾಪಾರ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಅವಧಿಯಲ್ಲಿ ಸಿಇಒಗಳ ದುಂಡುಮೇಜಿನ ಸಭೆಗಳು ಹೂಡಿಕೆ ಮತ್ತು ವ್ಯವಹಾರವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿವೆ.

ಭಾರತೀಯ ಆಹಾರ ಸಂಸ್ಕರಣಾ ಉದ್ಯಮದ ಪ್ರಗತಿ ಪ್ರದರ್ಶಿಸಲು ವಿವಿಧ ಮಂಟಪಗಳನ್ನು ಸ್ಥಾಪಿಸಲಾಗಿದೆ. ಈ ಮೆಗಾ ಕಾರ್ಯಕ್ರಮದಲ್ಲಿ ಆಹಾರ ಸಂಸ್ಕರಣಾ ಉದ್ಯಮದ ಹಲವಾರು ಅಂಶಗಳನ್ನು ಗುರಿಯಾಗಿಟ್ಟುಕೊಂಡು 48 ಅದಿವೇಶನಗಳನ್ನು ಆಯೋಜಿಸಲಾಗುತ್ತಿದೆ. ಆರ್ಥಿಕ ಸಬಲೀಕರಣ, ಗುಣಮಟ್ಟದ ಭರವಸೆ ಮತ್ತು ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನದಲ್ಲಿನ ನಾವೀನ್ಯತೆಗಳ ಮೇಲೆ ಸಂಪೂರ್ಣ ಗಮನಹರಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com