ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ: ಐವರ ಬಂಧನ, ಯೂಟ್ಯೂಬರ್ ಎಲ್ವಿಶ್ ವಿರುದ್ಧವೂ ಕೇಸ್

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಐವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ ಮತ್ತು ಈ ಸಂಬಂಧ ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧವೂ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ...
ಯೂಟ್ಯೂಬರ್ ಎಲ್ವಿಶ್
ಯೂಟ್ಯೂಬರ್ ಎಲ್ವಿಶ್

ನೋಯ್ಡಾ: ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಐವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ ಮತ್ತು ಈ ಸಂಬಂಧ ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧವೂ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪೀಪಲ್ ಫಾರ್ ಅನಿಮಲ್ಸ್(ಪಿಎಫ್‌ಎ)ನ ಕಾರ್ಯಕರ್ತರೊಂದಿಗೆ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿ, ಬಂಧಿತರ ವಶದಲ್ಲಿದ್ದ ಒಂಬತ್ತು ಹಾವುಗಳನ್ನು ರಕ್ಷಿಸಲಾಗಿದೆ. ಅವರು ಪಾರ್ಟಿಗಾಗಿ ಸೆಕ್ಟರ್ 51 ರಲ್ಲಿನ ಬ್ಯಾಂಕ್ವೆಟ್ ಹಾಲ್‌ಗೆ ಗುರುವಾರ ಬಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೆಕ್ಟರ್ 51 ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವನ್ಯಜೀವಿ(ರಕ್ಷಣೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಮತ್ತು ಕ್ರಿಮಿನಲ್ ಪಿತೂರಿಗಾಗಿ ಎಲ್ವಿಶ್ ಯಾದವ್ ಸೇರಿದಂತೆ ಆರು ಜನರ ವಿರುದ್ಧ ಪಿಎಫ್‌ಎ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

"ಬ್ಯಾಂಕ್ವೆಟ್ ಹಾಲ್‌ನಲ್ಲಿದ್ದ ಐದು ಜನರನ್ನು ಬಂಧಿಸಲಾಗಿದೆ ಮತ್ತು ಒಂಬತ್ತು ಹಾವುಗಳನ್ನು ಅವರ ವಶದಿಂದ ರಕ್ಷಿಸಲಾಗಿದೆ" ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಬಂಧಿತರನ್ನು ಆಗ್ನೇಯ ದೆಹಲಿಯ ಬದರ್‌ಪುರದ ಮೊಹರ್‌ಬಂದ್ ಗ್ರಾಮದ ನಿವಾಸಿಗಳಾದ ರಾಹುಲ್(32), ತೀತುನಾಥ್ (45), ಜೈಕರನ್ (50), ನಾರಾಯಣ್ (50) ಮತ್ತು ರವಿನಾಥ್ (45) ಎಂದು ಗುರುತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com