ಪಾಕ್ ಜೈಲಿನಿಂದ ಬಿಡುಗಡೆಯಾದ 80 ಭಾರತೀಯ ಮೀನುಗಾರರು ಬಿಎಸ್ ಎಫ್ ಗೆ ಹಸ್ತಾಂತರ!

ಪಾಕಿಸ್ತಾನದ ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾದ 80 ಭಾರತೀಯ ಮೀನುಗಾರರನ್ನು ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಕರಾಚಿಯ ಮಲಿರ್ ಜೈಲಿನಲ್ಲಿದ್ದ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಗುರುವಾರ ಬಿಡುಗಡೆ ಮಾಡಿತ್ತು.
ವಾಘಾ ಗಡಿ
ವಾಘಾ ಗಡಿ

ಅಮೃತಸರ: ಪಾಕಿಸ್ತಾನದ ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾದ 80 ಭಾರತೀಯ ಮೀನುಗಾರರನ್ನು ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕರಾಚಿಯ ಮಲಿರ್ ಜೈಲಿನಲ್ಲಿದ್ದ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ಗುರುವಾರ ಬಿಡುಗಡೆ ಮಾಡಿತ್ತು.

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ನೀಡಿದ ತುರ್ತು ಪ್ರಯಾಣ ಪ್ರಮಾಣಪತ್ರದ ಮೂಲಕ ಅಟ್ಟಾರಿ-ವಾಘಾ ಗಡಿಯ ಭೂ ಸಾರಿಗೆ ಮಾರ್ಗದ ಮೂಲಕ ಎಲ್ಲಾ ಕೈದಿಗಳು ಶುಕ್ರವಾರ ರಾತ್ರಿ ಭಾರತಕ್ಕೆ ಮರಳಿದ್ದಾರೆ ಎಂದು  ಪಂಜಾಬ್ ಪೊಲೀಸ್ ಪ್ರೋಟೋಕಾಲ್ ಅಧಿಕಾರಿ ಅರುಣ್ ಮಹಲ್ ಹೇಳಿದ್ದಾರೆ.

ನಂತರ ಅವರನ್ನು ಭಾರತೀಯ ವೈದ್ಯರ ತಂಡದಿಂದ ತಪಾಸಣೆ ನಡೆಸಲಾಯಿತು. ಮೂರು ವರ್ಷಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಅವರ ದೋಣಿಗಳು ಪಾಕಿಸ್ತಾನದ ಕಡೆಗೆ ತೆರಳಿದಾಗ ಅವರನ್ನು ಬಂಧಿಸಲಾಗಿತ್ತು. ಭಾರತಕ್ಕೆ ವಾಪಸ್ಸಾದ ನಂತರ ಭೂಮಿಗೆ ಗೌರವಾರ್ಥವಾಗಿ ನಮಸ್ಕರಿಸಿದರು ಎಂದು ಅವರು ಹೇಳಿದರು.

ಅರೇಬಿಯನ್ ಸಮುದ್ರದಲ್ಲಿನ ಕಡಲ ಗಡಿಯನ್ನು ಸರಿಯಾಗಿ ತಿಳಿಯದಕಾರಣ ಭಾರತ ಮತ್ತು ಪಾಕಿಸ್ತಾನದ ಮೀನುಗಾರರನ್ನು ಅವರ ದೋಣಿಗಳೊಂದಿಗೆ ಆಗಾಗ್ಗೆ ಬಂಧಿಸಲಾಗುತ್ತದೆ. ಅನೇಕ ಮೀನುಗಾರಿಕಾ ದೋಣಿಗಳು ತಮ್ಮ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ಅಗತ್ಯವಾದ ತಂತ್ರಜ್ಞಾನವನ್ನು ಹೊಂದಿಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com