'ಶಿವ ಗಾಂಜಾ ವ್ಯಸನಿಗಳ ಗುರು': ಶಿವಭಕ್ತರ ಕೆಂಗಣ್ಣಿಗೆ ಗುರಿಯಾದ ಸಿಪಿಐ(ಎಂ) ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಭಗವಂತ ಶಿವನ ಕುರಿತು ಹೇಳಿಕೆ ನೀಡಿ ರಾಜಕೀಯ ಗದ್ದಲ ಎಬ್ಬಿಸಿದ್ದಾರೆ.
ಬಿಕಾಶ್ ರಂಜನ್ ಭಟ್ಟಾಚಾರ್ಯ
ಬಿಕಾಶ್ ರಂಜನ್ ಭಟ್ಟಾಚಾರ್ಯ
Updated on

ಕೋಲ್ಕತ್ತಾ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಭಗವಂತ ಶಿವನ ಕುರಿತು ಹೇಳಿಕೆ ನೀಡಿ ರಾಜಕೀಯ ಗದ್ದಲ ಎಬ್ಬಿಸಿದ್ದಾರೆ.

ಸಿಪಿಐ(ಎಂ) ಸಂಸದರು ನವೆಂಬರ್ 11ರಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ನನ್ನ ಬಾಲ್ಯದಲ್ಲಿ ಪೋಸ್ಟ್‌ಮ್ಯಾನ್ ಒಬ್ಬ ಕುಡಿದು ಶಿವ ದೇವಾಲಯಕ್ಕೆ ಒದೆಯುವುದನ್ನು ನೋಡಿದ್ದೇನೆ. ಆತ ತನ್ನ ಕುಟುಂಬವನ್ನು ನೋಡಿಕೊಳ್ಳುವಂತೆ ಮಹಾದೇವನನ್ನು ಬೇಡಿಕೊಳ್ಳುತ್ತಿದ್ದನು ಎಂದು ಬರೆದಿದ್ದಾರೆ.

ಮಹಾದೇವ (ಶಿವ) ಮದ್ಯ ಮತ್ತು ಗಾಂಜಾ ಸೇವನಿಗಳ ಗುರುವಾಗಿದ್ದು ಕುಡುಕರು ತಮ್ಮ ಕುಟುಂಬಗಳನ್ನು ಶಿವ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ನಾಶವಾದ ಕುಟುಂಬಗಳ ಸಂಖ್ಯೆಯನ್ನು ಯಾರು ಲೆಕ್ಕ ಹಾಕುತ್ತಿದ್ದಾರೆ ಎಂದು ಬರೆದಿದ್ದಾರೆ. 

ಮುಂದುವರೆದು, ಕಾಳಿಘಾಟ್‌ನ ನಕುಲೇಶ್ವರ ಲೇನ್ ಮಹಾಕಾಳಿ ಪಾಠಶಾಲೆಯ ಸಮೀಪವಿರುವ ಕಿರಿದಾದ ರಸ್ತೆಯಲ್ಲಿ ನೀವು ಮಾಹಿಮ್ ಹಲ್ದರ್ ಸ್ಟ್ರೀಟ್‌ನಿಂದ ನಕುಲೇಶ್ವರ ಲೇನ್‌ಗೆ ಪ್ರವೇಶಿಸಿದರೆ, ನಾಲ್ಕೈದು ಮನೆಗಳ ನಂತರ, ನೀವು ಒಂದು ಸಣ್ಣ ಶಿವನ ದೇವಸ್ಥಾನವನ್ನು ಕಾಣಬಹುದು. ಒಂದು ದಿನ ಸಂಜೆ ಅಮಲೇರಿದ ಸ್ಥಿತಿಯಲ್ಲಿದ್ದ ಏರಿಯಾದ ಪೋಸ್ಟ್‌ಮ್ಯಾನ್ ದೇವಸ್ಥಾನದ ಮುಂದೆ ಒದ್ದಾಡುತ್ತಾ ಅದರ ಮುಂದೆ ಕುಳಿತಿದ್ದನ್ನು ನೋಡಿದೆ. ಆತ ಶಿವನನ್ನು ಪ್ರಾರ್ಥಿಸುತ್ತಿರುವುದನ್ನು ನೋಡಿದೆ. ಆತ 'ಬಾಬಾ, ನೀವು ಮದ್ಯ ಮತ್ತು ಗಾಂಜಾದ ಪ್ರಭುವಾಗಿರುವುದರಿಂದ, ನೀವು ಕುಡಿಯುವವರ ಕುಟುಂಬಗಳನ್ನು ನೋಡಿಕೊಳ್ಳಬೇಕು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ.

ನಾನು ಅವರ ಪ್ರಾರ್ಥನೆಯನ್ನು ಕೇಳಿ ಆನಂದಿಸಿದೆ. ಗಾಂಜಾ ವ್ಯಸನಿಗಳ ಗುರು (ದೇವರು) ಸ್ವತಃ ಮಹಾದೇವ ಎಂದು ಬಡ ಪೋಸ್ಟ್‌ಮ್ಯಾನ್ ನಂಬುತ್ತಾರೆ. ಆದ್ದರಿಂದ, ಕುಡುಕರ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮಹದೇವ ತೆಗೆದುಕೊಳ್ಳಬೇಕು ಎಂದು ಭಟ್ಟಾಚಾರ್ಯ ಹೇಳಿದರು.

ಭಟ್ಟಾಚಾರ್ಯರ ಟೀಕೆಗಳು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಧಾರ್ಮಿಕ ವ್ಯಾಖ್ಯಾನಗಳ ಬಗ್ಗೆ ವಿಶಾಲವಾದ ದೃಷ್ಟಿಕೋನವನ್ನು ಎತ್ತಿ ತೋರಿಸುತ್ತದೆ.

ಭಟ್ಟಾಚಾರ್ಯ ಅವರ ಹೇಳಿಕೆಯನ್ನು ಟೀಕಿಸಿದ ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್, ಕಮ್ಯುನಿಸ್ಟ್ ಪಕ್ಷವು 'ಹಿಂದೂ ವಿರೋಧಿ' ಮತ್ತು ಯಾವಾಗಲೂ 'ಸನಾತನ ಧರ್ಮ'ದ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com