ದೀಪಾವಳಿ ಹಿನ್ನಲೆ ಮದ್ಯ ಮಾರಾಟದಿಂದ ದೆಹಲಿ ಸರ್ಕಾರಕ್ಕೆ 525 ಕೋಟಿ ರೂ. ಗಳಿಕೆ; 2 ವಾರಗಳಲ್ಲಿ 3 ಕೋಟಿ ಬಾಟಲ್ ಮಾರಾಟ!

ದೆಹಲಿಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಸುಮಾರು 121 ಕೋಟಿ ರೂಪಾಯಿ ಮೌಲ್ಯದ 64 ಲಕ್ಷ ಮದ್ಯದ ಬಾಟಲಿಗಳನ್ನು ಜನರು ಖರೀದಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೆಹಲಿಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಸುಮಾರು 121 ಕೋಟಿ ರೂಪಾಯಿ ಮೌಲ್ಯದ 64 ಲಕ್ಷ ಮದ್ಯದ ಬಾಟಲಿಗಳನ್ನು ಜನರು ಖರೀದಿಸಿದ್ದಾರೆ. 

ಅಧಿಕೃತ ಮಾಹಿತಿಯ ಪ್ರಕಾರ, ದೀಪಾವಳಿಯ ಒಂದು ವಾರದ ಮೊದಲು ಒಂದು ಕೋಟಿಗೂ ಹೆಚ್ಚು ಮದ್ಯದ ಬಾಟಲಿಗಳ ಮಾರಾಟದಿಂದ ಸರ್ಕಾರಕ್ಕೆ 234.15 ಕೋಟಿ ರೂ. ಆದಾಯ ಬಂದಿತ್ತು. ದೆಹಲಿಯಲ್ಲಿ ಹೋಳಿ, ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಮದ್ಯವನ್ನು ವೈಯಕ್ತಿಕ ಬಳಕೆ ಮತ್ತು ಶೇಖರಣೆಗಾಗಿ ಮಾತ್ರವಲ್ಲದೆ ಉಡುಗೊರೆಯಾಗಿ ನೀಡಲು ಸಹ ಖರೀದಿಸುವುದರಿಂದ ಮಾರಾಟ ಹೆಚ್ಚಾಗುತ್ತದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ದೀಪಾವಳಿಯ ಹಿಂದಿನ 17 ದಿನಗಳಲ್ಲಿ ಒಟ್ಟು ಮಾರಾಟವು ಮೂರು ಕೋಟಿಗೂ ಹೆಚ್ಚು ಬಾಟಲಿಗಳಾಗಿದ್ದು, 525.84 ಕೋಟಿ ಆದಾಯವನ್ನು ಗಳಿಸಿದೆ. ದೀಪಾವಳಿಗೆ ಮುನ್ನವೇ ಮದ್ಯ ಮಾರಾಟ ಹೆಚ್ಚಿದ್ದು, ಗುರುವಾರ, ಶುಕ್ರವಾರ ಮತ್ತು ಶನಿವಾರದಂದು ಕ್ರಮವಾಗಿ 17.33 ಲಕ್ಷ, 18.89 ಲಕ್ಷ ಮತ್ತು 27.89 ಲಕ್ಷ ಬಾಟಲಿಗಳು ಅಂಗಡಿಗಳಲ್ಲಿ ಮಾರಾಟವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೀಪಾವಳಿಯಂದು ದೆಹಲಿಯಲ್ಲಿ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು.

ಮೂರು ದಿನಗಳಲ್ಲಿ ಒಟ್ಟು 64 ಲಕ್ಷ ಬಾಟಲಿಗಳ ಮಾರಾಟದಿಂದ ದೆಹಲಿ ಸರ್ಕಾರಕ್ಕೆ ಒಟ್ಟು 120.92 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ದೀಪಾವಳಿಯ ಮೂರು ದಿನಗಳ ಮೊದಲು ಕ್ರಮವಾಗಿ 13.46 ಲಕ್ಷ, 15 ಲಕ್ಷ ಮತ್ತು 19.39 ಲಕ್ಷ ಬಾಟಲಿಗಳಲ್ಲಿ ಮದ್ಯ ಮಾರಾಟವಾಗಿತ್ತು. 2022ರ ದೀಪಾವಳಿಯ ಹಿಂದಿನ 17 ದಿನಗಳಲ್ಲಿ ದೆಹಲಿಯಲ್ಲಿ 2.11 ಕೋಟಿ ಮದ್ಯದ ಬಾಟಲಿಗಳು ಮಾರಾಟವಾಗಿವೆ. ಈ ನಿಟ್ಟಿನಲ್ಲಿ, ಈ ವರ್ಷ ಮಾರಾಟವಾದ ಬಾಟಲಿಗಳ ಸಂಖ್ಯೆ ಸುಮಾರು 42 ಪ್ರತಿಶತದಷ್ಟು ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com