ಕನ್ಹಯ್ಯ ಲಾಲ್ ಹತ್ಯೆ ಆರೋಪಿಗಳು ಬಿಜೆಪಿ ಮಂದಿ: ಗೆಹ್ಲೋಟ್

ಕನ್ಹಯ್ಯ ಲಾಲ್ ಹತ್ಯೆ ಆರೋಪಿಗಳು ಬಿಜೆಪಿಯ ಮಂದಿ ಎಂದು ಹೇಳುವ ಮೂಲಕ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್

ಜೈಪುರ: ಕನ್ಹಯ್ಯ ಲಾಲ್ ಹತ್ಯೆ ಆರೋಪಿಗಳು ಬಿಜೆಪಿಯ ಮಂದಿ ಎಂದು ಹೇಳುವ ಮೂಲಕ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಪಕ್ಷದ ಒತ್ತಡದ ಪರಿಣಾಮವಾಗಿ ಹತ್ಯೆ ಘಟನೆ ನಡೆಯುವುದಕ್ಕೂ ಕೆಲವೇ ದಿನಗಳ ಮುನ್ನ ಆರೋಪಿಗಳನ್ನು ಬಿಡುಗಡೆ ಮಾಡಲಿತ್ತು ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ. 

ನವೆಂಬರ್ 25 ರಂದು ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಜೋಧ್‌ಪುರದಲ್ಲಿ ನಡೆದ ಸಭೆಯಲ್ಲಿ ಅವರು ಆರೋಪ ಮಾಡಿದರು. ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಉದಯಪುರ ಟೈಲರ್‌ನನ್ನು ಕಳೆದ ವರ್ಷ ಜೂನ್ 28 ರಂದು ಇಬ್ಬರು ಹತ್ಯೆ ಮಾಡಿದ್ದರು.

ರಾಜ್ಯದ ಪ್ರತಿಪಕ್ಷ ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ ಮತ್ತು ಕೋಮು ಘಟನೆಗಳನ್ನು ತಡೆಯುವಲ್ಲಿ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರದ ವೈಫಲ್ಯವೇ ಟೈಲರ್ ಕ್ರೂರ ಹತ್ಯೆಗೆ ಕಾರಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

"ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಆರೋಪಿಗಳು ಬಿಜೆಪಿಯವರೇ ಆಗಿದ್ದಾರೆ. ಘಟನೆ ನಡೆಯುವ ಎರಡು-ಮೂರು ದಿನಗಳ ಮೊದಲು ಅವರು ಕೆಲವು ವಾಗ್ವಾದದ ಘಟನೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು ಮತ್ತು ಬಿಜೆಪಿ ನಾಯಕರ ಒತ್ತಡದ ಮೇರೆಗೆ ಅವರನ್ನು ಪೊಲೀಸ್ ಬಂಧನದಿಂದ ಬಿಡುಗಡೆ ಮಾಡಲಾಗಿತ್ತು" ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.

ಇದರಿಂದಾಗಿ ಬಿಜೆಪಿ ಈ ಘಟನೆಯ ಬಗ್ಗೆ "ರಕ್ಷಣಾತ್ಮಕ" ವಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಇದೇ ಘಟನೆಯ ವಿಷಯವಾಗಿ ಪ್ರಧಾನಿ ಮೋದಿ ಸಹ ರಾಜಸ್ಥಾನದ ಸರ್ಕಾರವನ್ನು ಟಾರ್ಗೆಟ್ ಮಾಡಿ ಭಾಷಣ ಮಾಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com