

ತಿರುವನಂತಪುರಂ: ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಸೀನಾ ಮುನೀರ್ ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಆಕೆಯ ಪತಿ ಮುನೀರ್ ಆಲುವಾ ಸಂತ್ರಸ್ತ ಕುಟುಂಬದಿಂದ ಹಣ ವಸೂಲಿ ಮಾಡಿದ್ದು ಇದರಿಂದ ಪಕ್ಷಕ್ಕೆ ಕಳಂಕ ತಂದಿದ್ದಾರೆ ಎಂದು ಈ ಕ್ರಮ ಕೈಗೊಳ್ಳಲಾಗಿದೆ.
ಮುನೀರ್ 1,20,000 ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಅಲುವಾದಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಒಳಗಾದ ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಮುನೀರ್ ಕೇವಲ 70,000 ರೂಪಾಯಿಗಳನ್ನು ನೀಡಿದ್ದು ಉಳಿದ ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದಾರೆ ಎಂದು ಹುಡುಗಿಯ ತಂದೆ ಹೇಳಿದ್ದಾರೆ. ವಾಸ್ತವವಾಗಿ ಬಾಲಕಿಯ ಕುಟುಂಬಕ್ಕೆ ಸರ್ಕಾರ ಪರಿಹಾರವಾಗಿ ನೀಡಿದ 10 ಲಕ್ಷ ರೂ.ಗಳನ್ನು ನಿಶ್ಚಿತ ಠೇವಣಿಯಾಗಿ ಇರಿಸಲಾಗಿದೆ.
ಹತ್ಯೆಗೊಳಗಾದ ಐದು ವರ್ಷದ ಬಾಲಕಿಯ ಕುಟುಂಬವನ್ನು ಮುನೀರ್ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರು ಸಹಾಯ ಮಾಡುವುದಾಗಿ ಹೇಳಿ ಬಾಲಕಿಯ ತಂದೆಯ ಖಾತೆಯಿಂದ ಹಣ ಡ್ರಾ ಮಾಡಲು ಎಟಿಎಂ ಕಾರ್ಡ್ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪಗಳನ್ನು ಮುನೀರ್ ನಿರಾಕರಿಸಿದ್ದಾರೆ.
ನ್ಯಾಯಾಲಯ ಮರಣದಂಡನೆ ವಿಧಿಸಿತು
ಈ ಪ್ರಕರಣದಲ್ಲಿ ಎರಡು ದಿನಗಳ ಹಿಂದೆ ಆಲುವಾದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ಅಶ್ಫಾಕ್ ಆಲಂಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆಲಂಗೆ ಯಾವುದೇ ವಿನಾಯತಿಗೆ ಅರ್ಹರಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ವರ್ಷದ ಜುಲೈನಲ್ಲಿ ಈ ಅಪರಾಧ ನಡೆದಿದ್ದು, ಬಿಹಾರದ ವಲಸೆ ಕಾರ್ಮಿಕ ಆಲಂ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ ಐದು ವರ್ಷದ ಸಂತ್ರಸ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ ಮಾಡಿದ್ದನು.
Advertisement