ಏರ್ ಇಂಡಿಯಾ ವಿಮಾನ ಸ್ಫೋಟಿಸುವ ಬೆದರಿಕೆ: ಖಲಿಸ್ತಾನಿ ಉಗ್ರ ಪನ್ನು ವಿರುದ್ಧ ಪ್ರಕರಣ ದಾಖಲಿಸಿದ ಎನ್ಐಎ!

ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ಪ್ರಕರಣ ದಾಖಲಿಸಿದೆ. ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಈ ಪ್ರಕರಣ ದಾಖಲಾಗಿದೆ.
ಗುರುಪತ್ವಂತ್ ಸಿಂಗ್ ಪನ್ನು
ಗುರುಪತ್ವಂತ್ ಸಿಂಗ್ ಪನ್ನು
Updated on

ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಸೋಮವಾರ ಪ್ರಕರಣ ದಾಖಲಿಸಿದೆ. ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಈ ಪ್ರಕರಣ ದಾಖಲಾಗಿದೆ. 

ಪನ್ನು ಸಿಖ್ಸ್ ಫಾರ್ ಜಸ್ಟಿಸ್ ಎಂಬ ಖಲಿಸ್ತಾನಿ ಸಂಘಟನೆಯ ಸ್ಥಾಪಕ. ನವೆಂಬರ್ 19ರಂದು ಏರ್ ಇಂಡಿಯಾ ವಿಮಾನವನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಈ ಹಿನ್ನಲೆಯಲ್ಲಿ ಪನ್ನು ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 153 ಎ ಮತ್ತು 506 ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967ರ ಸೆಕ್ಷನ್ 10, 13, 16, 17, 18, 18 ಬಿ ಮತ್ತು 20ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನವೆಂಬರ್ 4 ರಂದು ವಿಡಿಯೋ ಬಿಡುಗಡೆ
ಖಲಿಸ್ತಾನಿ ಭಯೋತ್ಪಾದಕ ಪನ್ನು ನವೆಂಬರ್ 4ರಂದು ವಿಡಿಯೋ ಬಿಡುಗಡೆ ಮಾಡಿದ್ದನು. ಏರ್ ಇಂಡಿಯಾ ವಿಮಾನಗಳನ್ನು ಹತ್ತದಂತೆ ಸಿಖ್ಖರಿಗೆ ಬೆದರಿಕೆ ಹಾಕಿದ್ದನು. ಹಾಗೆ ಮಾಡುವವರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದು ಪನ್ನು ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಏರ್ ಇಂಡಿಯಾ ವಿಶ್ವದಾದ್ಯಂತ ತನ್ನ ವಿಮಾನಗಳನ್ನು ನಿಲ್ಲಿಬೇಕು. ನವೆಂಬರ್ 19ರಂದು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಬೇಕು ಎಂದು ಪನ್ನು ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದ್ದರು. ದೆಹಲಿಯಲ್ಲಿರುವ ಈ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಈ ಹಿಂದೆಯೂ ಬೆದರಿಕೆ
ಸಿಖ್ಖರು ಮತ್ತು ದೇಶದ ಇತರ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮೂಲಕ ಪನ್ನು ಪಂಜಾಬ್ ಸಮಸ್ಯೆಗಳಿಗೆ, ವಿಶೇಷವಾಗಿ ಸಿಖ್ ಧರ್ಮಕ್ಕೆ ಸಂಬಂಧಿಸಿದಂತೆ ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಎನ್ಐಎ ಹೇಳಿದೆ. ಈ ಹಿಂದೆ ಪನ್ನು ಯಾವ ಆಧಾರದ ಮೇಲೆ ಬೆದರಿಕೆಗಳನ್ನು ನೀಡಿದ್ದನೋ ಅದೇ ಕಥೆಯ ಪ್ರಕಾರ ಇತ್ತೀಚಿನ ಬೆದರಿಕೆ ಇದೆ ಎಂದು ಕೇಂದ್ರ ಸಂಸ್ಥೆ ಹೇಳಿದೆ. ಇವುಗಳಲ್ಲಿ ಆತ ಭಾರತದಲ್ಲಿನ ರೈಲ್ವೇಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳು ಸೇರಿದಂತೆ ಅಗತ್ಯ ಸಾರಿಗೆ ಜಾಲ ವ್ಯವಸ್ಥೆಗಳಿಗೆ ಬೆದರಿಕೆ ಹಾಕಿದ್ದನು. ಜುಲೈ 10ರಂದು ಗೃಹ ಸಚಿವಾಲಯ SFJ ಅನ್ನು ತನ್ನ ಚಟುವಟಿಕೆಗಳಿಗಾಗಿ ನಿಷೇಧಿಸಿತ್ತು. 2020 ಜುಲೈ 1ರಂದು ಪನ್ನುವನ್ನು ಕೇಂದ್ರವು ಭಯೋತ್ಪಾದಕ ಎಂದು ಪಟ್ಟಿ ಮಾಡಿದೆ.

ಪನ್ನು 2019ರಿಂದ ಎನ್‌ಐಎ ರಾಡಾರ್‌ನಲ್ಲಿದ್ದಾನೆ. ನಂತರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಆತನ ವಿರುದ್ಧ ಮೊದಲ ಪ್ರಕರಣ ದಾಖಲಿಸಿತ್ತು. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಎನ್‌ಐಎ ಅಮೃತಸರ (ಪಂಜಾಬ್) ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶದಲ್ಲಿ ಪಟ್ಟಿಮಾಡಿದ ಭಯೋತ್ಪಾದಕನ ಮನೆ ಮತ್ತು ಭೂಮಿಯ ಭಾಗವನ್ನು ವಶಪಡಿಸಿಕೊಂಡಿತ್ತು. NIA ವಿಶೇಷ ನ್ಯಾಯಾಲಯವು 3 ಫೆಬ್ರವರಿ 2021ರಂದು ಪನ್ನುನ್ ವಿರುದ್ಧ ಬಂಧನದ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಕಳೆದ ವರ್ಷ ನವೆಂಬರ್ 29 ರಂದು ಅವರ ಹೆಸರನ್ನು 'ಘೋಷಿತ ಅಪರಾಧಿ' ಎಂದು ಘೋಷಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com