ಪಿಎಂ ಅಂದರೆ ಪನೌತಿ (ಅದೃಷ್ಟಹೀನ) ಮೋದಿ ಎಂದರ್ಥ: ರಾಹುಲ್ ಗಾಂಧಿ

ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದ್ದಾರೆ. ಪಿಎಂ ಅಂದರೆ ಪನೌತಿ (ಅದೃಷ್ಟಹೀನ ಎಂಬ ಅರ್ಥ) ಮೋದಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ.
ರಾಹುಲ್ ಗಾಂಧಿ.

ಜೈಪುರ: ರಾಜಸ್ಥಾನ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸಿದ್ದಾರೆ. ಪಿಎಂ ಅಂದರೆ ಪನೌತಿ (ಅದೃಷ್ಟಹೀನ ಎಂಬ ಅರ್ಥ) ಮೋದಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
 
ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ಸ್ ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡಿದ್ದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಧಾನಿಯ ಉಪಸ್ಥಿತಿಯನ್ನು ಹತಭಾಗ್ಯ ಪರಿಸ್ಥಿತಿಗೆ ಹೋಲಿಸಿದ್ದಾರೆ. ನ.19 ರಂದು ಅಹ್ಮದಾಬಾದ್ ನಲ್ಲಿ ನಡೆದ ಐಸಿಸಿ ವಿಶ್ವಕಪ್ ಫೈನಲ್ಸ್ ಪಂದ್ಯ ವೀಕ್ಷಿಸಲು ಪ್ರಧಾನಿ ಮೋದಿ ಆಗಮಿಸಿದ್ದರು.

ಅದಾನಿ ಜನರ ಜೇಬನ್ನು ದೋಚುತ್ತಿದ್ದರೆ, ಮೋದಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮೋದಿ ಟಿವಿಯಲ್ಲಿ ಬಂದು ಹಿಂದೂ-ಮುಸ್ಲಿಂ ಬಗ್ಗೆ ಮಾತನಾಡುತ್ತಾರೆ, ಕೆಲವೊಮ್ಮೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ತೆರಳುತ್ತಾರೆ, ಆ ಪಂದ್ಯದಲ್ಲಿ ನಾವು ಸೋತಿದ್ದು ದುರದೃಷ್ಟಕರ, ಪಿಎಂ ಅಂದರೆ ಪನೌತಿ ಮೋದಿ ಎಂದರ್ಥ ಎಂದು ರಾಹುಲ್ ಗಾಂಧಿ ಹೇಳಿದರು.  ನ.25 ರಂದು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com