ಕೊಚ್ಚಿ: ವಲಸೆ ಮಗುವಿಗೆ ತಾಯಿಯಾದ ಪೊಲೀಸ್ ಅಧಿಕಾರಿ; ಇಲಾಖೆ, ಸಾರ್ವಜನಿಕರಿಂದ ಮೆಚ್ಚುಗೆ

ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನಾಲ್ಕು ತಿಂಗಳ ಮಗುವಿಗೆ ಎದೆ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿದ್ದು, ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಎದೆ ಹಾಲುಣಿಸುತ್ತಿರುವ ಪೊಲೀಸ್ ಅಧಿಕಾರಿ
ಎದೆ ಹಾಲುಣಿಸುತ್ತಿರುವ ಪೊಲೀಸ್ ಅಧಿಕಾರಿ

ಕೊಚ್ಚಿ: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನಾಲ್ಕು ತಿಂಗಳ ಮಗುವಿಗೆ ಎದೆ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿದ್ದು, ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬಿಹಾರ ಮೂಲದ ತಾಯಿ ಗುರುವಾರ ಶಸ್ತ್ರಚಿಕಿತ್ಸೆಯ ನಂತರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರಿಂದ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಿಶುವಿನ ಆರೈಕೆಗೆ ಮುಂದಾದ ಎರ್ನಾಕುಲಂ ವನಿತಾ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಅವರ ಈ ಉದಾತ್ತ ಕಾರ್ಯಕ್ಕೆ ಸಹ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಶಸ್ತ್ರಚಿಕಿತ್ಸೆಯ ನಂತರ ಉಸಿರಾಟದ ತೊಂದರೆಯಿಂದಾಗಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ಕು ತಿಂಗಳ ಶಿಶು ಸೇರಿದಂತೆ ನಾಲ್ವರು ಮಕ್ಕಳಿಗೆ ಸಹಾಯದ ಅವಶ್ಯಕತೆ ಇದೆ ಎಂದು ಗುರುವಾರ ಪೊಲೀಸರಿಗೆ ತಿಳಿಸಲಾಗಿದೆ.

ತಕ್ಷಣ ಆಸ್ಪತ್ರೆಗೆ ಆಗಮಿಸಿದ ವನಿತಾ ಠಾಣೆಯ ಪೊಲೀಸ್ ತಂಡ, ಮಕ್ಕಳನ್ನು ಠಾಣೆಗೆ ಸ್ಥಳಾಂತರಿಸಿದೆ.

“ಪೊಲೀಸ್ ಅಧಿಕಾರಿಗಳು ಮಕ್ಕಳಿಗೆ ಆಹಾರವನ್ನು ಖರೀದಿಸಿದರು ಮತ್ತು ಇತ್ತೀಚೆಗೆ ಹೆರಿಗೆ ರಜೆಯಿಂದ ಕೆಲಸಕ್ಕೆ ಮರಳಿದ ಆರ್ಯ ಅವರು ನಾಲ್ಕು ತಿಂಗಳ ಮಗುವಿಗೆ ಎದೆ ಹಾಲುಣಿಸಿದರು. ನಂತರ ಮಕ್ಕಳನ್ನು ಕೊಚ್ಚಿಯ ಚೈಲ್ಡ್ ಕೇರ್ ಹೋಮ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮ್ಮ ತಂದೆ ಜೈಲಿನಲ್ಲಿದ್ದಾರೆ. ನಾನು ಮತ್ತು ನನ್ನ ಒಡಹುಟ್ಟಿದವರು ಕ್ರಮವಾಗಿ ಐದು ಮತ್ತು ಮೂರು ವರ್ಷ ವಯಸ್ಸಿನ ಹುಡುಗ ಮತ್ತು ಹುಡುಗಿ, ತಾಯಿಯೊಂದಿಗೆ ಕೇರಳದಲ್ಲಿ ನೆಲೆಸಿದ್ದೇವೆ ಎಂದು 13 ವರ್ಷದ ಹಿರಿಯ ಪುತ್ರಿ ಪೊಲೀಸರಿಗೆ ತಿಳಿಸಿದ್ದಾರೆ.

ಮಲಯಾಳಂ ಅನ್ನು ನಿರರ್ಗಳವಾಗಿ ಮಾತನಾಡುವ ಬಾಲಕಿಗೆ ಬಿಹಾರದಲ್ಲಿರುವ ತನ್ನ ಸ್ಥಳದ ಬಗ್ಗೆ ಗೊತ್ತಿಲ್ಲ ಎನ್ನುತ್ತಿದ್ದಾಳೆ. ಪೊಲೀಸರು ಅವರ ತಾಯಿಯ ಆರೋಗ್ಯ ಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಅವರ ಸಂಬಂಧಿಕರ ಪತ್ತೆಗೆ ಬಿಹಾರ ಪೊಲೀಸರ ನೆರವು ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com