ಮಸೂದೆ ಅಂಗೀಕಾರಕ್ಕೆ ವಿಳಂಬ: ಪಂಜಾಬ್ ರಾಜ್ಯಪಾಲರ ಕೇಸಿನ ತೀರ್ಪು ನೋಡುವಂತೆ ಕೇರಳ ರಾಜ್ಯಪಾಲಗೆ 'ಸುಪ್ರೀಂ' ಸೂಚನೆ!

"ತಡೆಹಿಡಿಯುವ ಮಸೂದೆಗಳನ್ನು" ಮರುಪರಿಶೀಲನೆಗಾಗಿ ವಿಧಾನಸಭೆಗೆ ಹಿಂತಿರುಗಿಸಬೇಕು ಎಂದು ಪಂಜಾಬ್ ರಾಜ್ಯಪಾಲರ ಪ್ರಕರಣದಲ್ಲಿ ತನ್ನ ತೀರ್ಪನ್ನು ಓದಿಕೊಳ್ಳುವಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: "ತಡೆಹಿಡಿಯುವ ಮಸೂದೆಗಳನ್ನು" ಮರುಪರಿಶೀಲನೆಗಾಗಿ ವಿಧಾನಸಭೆಗೆ ಹಿಂತಿರುಗಿಸಬೇಕು ಎಂದು ಪಂಜಾಬ್ ರಾಜ್ಯಪಾಲರ ಪ್ರಕರಣದಲ್ಲಿ ತನ್ನ ತೀರ್ಪನ್ನು ಓದಿಕೊಳ್ಳುವಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ. 

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧದ ಕೇರಳ ಸರ್ಕಾರದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಇಂದು ಈ ವಿಷಯ ತಿಳಿಸಿದ್ದು, ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ರಾಜ್ಯದ ಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಮೂಲಕ ತಮ್ಮ ಒಪ್ಪಿಗೆ ನೀಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. 

ಕೇರಳ ಸರ್ಕಾರವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕೆಕೆ ವೇಣುಗೋಪಾಲ್ ಅವರು ರಾಜ್ಯಪಾಲರ ಮುಂದೆ ಒಪ್ಪಿಗೆಗೆ ಬಾಕಿಯಿರುವ ಹಲವು ದೀರ್ಘ ಮಸೂದೆಗಳನ್ನು ಎತ್ತಿ ತೋರಿಸಿದರು. ಅವುಗಳಲ್ಲಿ ಕೆಲವು ಎರಡಕ್ಕೂ ಹೆಚ್ಚು ವರ್ಷಗಳಿಂದ ತಡೆಹಿಡಿದ ಮಸೂದೆಗಳಾಗಿವೆ.

ರಾಜ್ಯಪಾಲರ ಒಪ್ಪಿಗೆ ಪಡೆಯದೆ ಇನ್ನೂ ಎಂಟು ವಿಧೇಯಕಗಳು ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು ತಮ್ಮನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ ಎಂದು ಹಿರಿಯ ವಕೀಲ ವೇಣುಗೋಪಾಲ್ ಅವರು ಸುಪ್ರೀಂ ಕೋರ್ಟ್ ಮುಂದೆ ತಿಳಿಸಿದರು. 

ಸುಪ್ರೀಂ ಕೋರ್ಟ್ ನ 27 ಪುಟಗಳ ತೀರ್ಪಿನ ಭಾಗವು ತಮಿಳುನಾಡು ರಾಜ್ಯಕ್ಕೂ ಅನ್ವಯಿಸುತ್ತದೆ, ಅಲ್ಲಿನ ರಾಜ್ಯಪಾಲ ಆರ್ ಎನ್ ರವಿ ಅವರು ಇತ್ತೀಚೆಗೆ 10 ಮಸೂದೆಗಳಿಗೆ ಒಪ್ಪಿಗೆಯನ್ನು ತಡೆಹಿಡಿದಿದ್ದರು ಆದರೆ ಮತ್ತೆ ವಿಧಾನಸಭೆಗೆ ಕಳುಹಿಸಿರಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com