ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಅಗೌರವ: ಮಿಚೆಲ್ ಮಾರ್ಶ್ ವಿರುದ್ಧ ಉತ್ತರ ಪ್ರದೇಶ ವ್ಯಕ್ತಿ ಪೊಲೀಸರಿಗೆ ದೂರು
ನವದೆಹಲಿ: ಸಾಮಾಜಿಕ ಕಾರ್ಯಕರ್ತರ ಗುಂಪಿನ ನಾಯಕನೋರ್ವಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಮಾರ್ಶ್ ವಿರುದ್ಧ ಉತ್ತರ ಪ್ರದೇಶದ ಪೊಲೀಸರಿಗೆ ದೂರು ನೀಡಿದ್ದಾರೆ.
ಐಸಿಸಿ ಪುರುಷರ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿದ್ದಕ್ಕಾಗಿ, ಭ್ರಷ್ಟಾಚಾರ ವಿರೋಧಿ ಸೇನೆಯ ಅಧ್ಯಕ್ಷ ಪಂಡಿತ್ ಕೇಶವ್ ದೇವ್ ಮಿಚೆಲ್ ಮಾರ್ಶ್ ವಿರುದ್ಧ ಅಲೀಘರ್ ಠಾಣೆಗೆ ದೂರು ನೀಡಿದ್ದಾರೆ.
ದೂರನ್ನು ಸ್ವೀಕರಿಸಲಾಗಿದೆ. ಆದರೆ ಈ ವರೆಗೂ ಪ್ರಕರಣವನ್ನು ದಾಖಲಿಸಲಾಗಿಲ್ಲ ಮತ್ತು ಸೈಬರ್ ಸೆಲ್‌ನಿಂದ ವರದಿಯನ್ನು ಪಡೆದ ನಂತರವೇ ಮುಂದಿನ ಕಾರ್ಯವಿಧಾನವನ್ನು ಅನುಸರಿಸಲಾಗುವುದು" ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಮೃಗಾಂಕ್ ಶೇಖರ್ ಹೇಳಿದ್ದಾರೆ.
"ದೇಶದ ಪ್ರಧಾನ ಮಂತ್ರಿ" ಗೆದ್ದ ತಂಡಕ್ಕೆ ಹಸ್ತಾಂತರಿಸಿದ ಟ್ರೋಫಿ ಮೇಲೆ ಕಾಲಿಡುವ ಮೂಲಕ ಆಸ್ಟ್ರೇಲಿಯಾದ ಕ್ರಿಕೆಟಿಗ ತನ್ನ ಕೃತ್ಯದಿಂದ ಭಾರತದ ಜನರನ್ನು ಅವಮಾನಿಸಿದ್ದಾರೆ ಎಂದು ಕೇಶವ್ ದೇವ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಗೆದ್ದಿತು. ಮಾರ್ಷ್ ಪಂದ್ಯದ ನಂತರ ಟ್ರೋಫಿಯ ಮೇಲೆ ತನ್ನ ಪಾದಗಳನ್ನು ವಿಶ್ರಮಿಸುತ್ತಾ ಲಾಂಗ್ ಮಾಡುತ್ತಿರುವುದು ಕಂಡುಬಂದಿತು.
ಸಾಮಾಜಿಕ ಮಾಧ್ಯಮದಲ್ಲಿ ತೋರಿಸಿದ ಭಂಗಿಯೊಂದಿಗಿನ ಅವರ ಚಿತ್ರಗಳನ್ನು ಅನೇಕ ಜನರು ಟೀಕಿಸಿದರು ಮತ್ತು ಇತರರು ಅವನನ್ನು ಸಮರ್ಥಿಸಿಕೊಂಡರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ