ಪಂಜಾಬ್‌ ಸರ್ಕಾರಕ್ಕೆ ಗೆಲುವು: ಮಸೂದೆಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಸೂಚನೆ

ರಾಜ್ಯಪಾಲರು ಯಾವುದೇ ಕ್ರಮ ತೆಗೆದುಕೊಳ್ಳದೆ ಅನಿರ್ದಿಷ್ಟಾವಧಿಯವರೆಗೆ ಮಸೂದೆಗಳನ್ನು ಬಾಕಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಸೂದೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪಂಜಾಬ್ ರಾಜ್ಯಪಾಲರಿಗೆ...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ರಾಜ್ಯಪಾಲರು ಯಾವುದೇ ಕ್ರಮ ತೆಗೆದುಕೊಳ್ಳದೆ ಅನಿರ್ದಿಷ್ಟಾವಧಿಯವರೆಗೆ ಮಸೂದೆಗಳನ್ನು ಬಾಕಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಸೂದೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಪಂಜಾಬ್ ರಾಜ್ಯಪಾಲರಿಗೆ ಸೂಚಿಸಿದೆ.

ಹಲವು ಮಸೂದೆಗಳನ್ನು ಬಾಕಿ ಉಳಿಸಿಕೊಂಡಿರುವ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ವಿರುದ್ಧ ಪಂಜಾಬ್ ನ ಆಪ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜನರಿಂದ ಆಯ್ಕೆಯಾದ ರಾಜ್ಯದ ಮುಖ್ಯಸ್ಥರಿಗೆ ಸಾಂವಿಧಾನಿಕ ಅಧಿಕಾರವನ್ನು ನೀಡಲಾಗಿದೆ. ಆದರೆ ಆ ಅಧಿಕಾರವನ್ನು ರಾಜ್ಯ ಶಾಸಕಾಂಗಗಳ ಸಾಮಾನ್ಯ ಕಾನೂನು ರಚನೆಯನ್ನು ತಡೆಯಲು ಬಳಸಬಾರದು ಎಂದು ಒತ್ತಿಹೇಳಿದೆ.

ರಾಜ್ಯಪಾಲರಿಗೆ ನೀಡಲಾದ ಅನಿಯಂತ್ರಿತ ವಿವೇಚನಾ ಅಧಿಕಾರವು "ಕ್ರಮಬದ್ಧವಾಗಿ ಚುನಾಯಿತ ಶಾಸಕರಿಂದ ಶಾಸಕಾಂಗದ ಕಾರ್ಯನಿರ್ವಹಣೆಯನ್ನು ವಾಸ್ತವಿಕವಾಗಿ ಜಾರಿಗೊಳಿಸುತ್ತದೆ" ಎಂಬುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಅಂತಹ ಕ್ರಮವು ವ್ಯತಿರಿಕ್ತವಾಗುತ್ತದೆ ಎಂದು ಹೇಳಿದೆ.

"ರಾಜ್ಯಪಾಲರು ರಾಜ್ಯದ ಚುನಾಯಿತರಾಗದ ಮುಖ್ಯಸ್ಥರಾಗಿ, ಕೆಲವು ಸಾಂವಿಧಾನಿಕ ಅಧಿಕಾರಗಳನ್ನು ವಹಿಸಿಕೊಂಡಿರುತ್ತಾರೆ. ಆದರೆ, ಆ ಅಧಿಕಾರವನ್ನು ರಾಜ್ಯ ಶಾಸಕಾಂಗಗಳ ಸಾಮಾನ್ಯ ಕಾನೂನು ರಚನೆಯನ್ನು ತಡೆಯಲು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯಲು ನಿರ್ಧರಿಸಿದರೆ, ಅವರು ಮರುಪರಿಶೀಲನೆಗಾಗಿ ಮಸೂದೆಯನ್ನು ಶಾಸಕಾಂಗಕ್ಕೆ ಹಿಂದಿರುಗಿಸಬೇಕು ಎಂದು ಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com