ಕೇರಳ: ಕೊಚ್ಚಿಯ ಕುಸಾಟ್ ಟೆಕ್ ಉತ್ಸವದಲ್ಲಿ ಕಾಲ್ತುಳಿತ, ನಾಲ್ವರು ವಿದ್ಯಾರ್ಥಿಗಳು ಸಾವು, 60 ಮಂದಿಗೆ ಗಾಯ

ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ (ಕುಸಾಟ್) ಸ್ಕೂಲ್ ಆಫ್ ಇಂಜಿನಿಯರಿಂಗ್ ಶನಿವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದ ವೇಳೆ ಉಂಟಾದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.  
ಗಾಯಗೊಂಡ ವಿದ್ಯಾರ್ಥಿಗಳು ಕೊಚ್ಚಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ
ಗಾಯಗೊಂಡ ವಿದ್ಯಾರ್ಥಿಗಳು ಕೊಚ್ಚಿಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ

ಕೊಚ್ಚಿ: ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ (ಕುಸಾಟ್) ಸ್ಕೂಲ್ ಆಫ್ ಇಂಜಿನಿಯರಿಂಗ್ ಶನಿವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದ ವೇಳೆ ಉಂಟಾದ ಕಾಲ್ತುಳಿತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.  ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ವಾರ್ಷಿಕೋತ್ಸವ ಟೆಕ್ ಫೆಸ್ಟ್ ಅಂಗವಾಗಿ ಶುಕ್ರವಾರದಿಂದ ಈ ಕಾರ್ಯಕ್ರಮ ನಡೆಯುತಿತ್ತು ಎನ್ನಲಾಗಿದೆ. 

ವಿಶ್ವವಿದ್ಯಾನಿಲಯದ ಬಯಲು ಸಭಾಂಗಣದಲ್ಲಿ ಈ ಘಟನೆ ನಡೆದಿದೆ ಎಂದು ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಪಿ ಕೆ ಬೇಬಿ ಟಿಎನ್‌ಐಇಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ನಾಲ್ವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸಭಾಂಗಣದ ಹಿಂಬದಿಯಿಂದ ಪ್ರೇಕ್ಷಕರು ಮುಂದಕ್ಕೆ ನುಗ್ಗಿದಾಗ ಕಾಲ್ತುಳಿತ ಉಂಟಾಗಿದೆ. ಈ ವೇಳೆ  2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿದ್ದರು. ಅನೇಕರು ಗಂಭೀರ ಗಾಯಗಳಿಂದ ಬದುಕುಳಿದಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು. 

"ನಾಲ್ವರನ್ನು ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿದೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದಟ್ಟಣೆ ನಿಯಂತ್ರಿಸುವಲ್ಲಿ ವಿಫಲವಾದ ಕಾರಣ ಈ ದುರಂತ ಸಂಭವಿಸಿದ್ದು, ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಕುಸಾಟ್ ನ ಮೂರನೇ ವರ್ಷದ  ಇಂಟಿಗ್ರೇಟೆಡ್ ಎಂಎಸ್ಸಿ ವಿದ್ಯಾರ್ಥಿ ಕೆ.ಎಸ್. ಅರವಿಂದ್ ಹೇಳಿದರು.

ಕಾರ್ಯಕ್ರಮ ಸಂಜೆ 6:45 ಕ್ಕೆ ಪ್ರಾರಂಭವಾಗಬೇಕಿತ್ತು. ಸಂಜೆ 7 ಗಂಟೆಯಾದಾಗ, ಯಾರೋ ಇದ್ದಕ್ಕಿದ್ದಂತೆ ಗೇಟ್ ಅನ್ನು ಸಂಪೂರ್ಣವಾಗಿ ತೆರೆದರು. ಆಗ ದೊಡ್ಡ ಪ್ರಮಾಣದ ವಿದ್ಯಾರ್ಥಿಗಳು ಗೇಟ್ ಮೇಲೆ ನೂಕಲ್ಪಟ್ಟರು. ಇದರಿಂದಾಗಿ ಮುಂಭಾಗದಲ್ಲಿ ನಿಂತವರು ಹಿಂದಿನಿಂದ ತಳ್ಳಿದ್ದರಿಂದ ಸಭಾಂಗಣಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಮುಗ್ಗರಿಸಿ ಬಿದ್ದರು. ಆ ಮೆಟ್ಟಿಲುಗಳ ಮೇಲೆ ಬಿದ್ದಿದ್ದವರು ತುಳಿದುಕೊಂಡು ವಿದ್ಯಾರ್ಥಿಗಳು ಒಳಗೆ ನುಗ್ಗಿದರು. ಇದರಿಂದಾಗಿ ಕಾಲ್ತುಳಿತ ಉಂಟಾಯಿತು.  ಇದರಿಂದಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ಅವರು ವಿವರಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com