ಮತದಾನ ಪ್ರಗತಿಯಲ್ಲಿ
ಮತದಾನ ಪ್ರಗತಿಯಲ್ಲಿ

ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಪ್ರಗತಿಯಲ್ಲಿ: ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ

ರಾಜಸ್ತಾನದ 199 ವಿಧಾನಸಭಾ ಸ್ಥಾನಗಳಿಗೆ ಶನಿವಾರ ಬೆಳಗ್ಗೆ ಮತದಾನ ಆರಂಭಗೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಜೈಪುರ: ರಾಜಸ್ಥಾನದ 199 ವಿಧಾನಸಭಾ ಸ್ಥಾನಗಳಿಗೆ ಶನಿವಾರ ಬೆಳಗ್ಗೆ ಮತದಾನ ಆರಂಭಗೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ರಾಜ್ಯದಾದ್ಯಂತ ಒಟ್ಟು 51,507 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ರಾಜಸ್ಥಾನದ ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ. ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಸ್ಥಾನಗಳಿವೆ. ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನಾರ್ ಅವರ ನಿಧನದ ನಂತರ ಶ್ರೀಗಂಗಾನಗರ ಜಿಲ್ಲೆಯ ಕರಣ್‌ಪುರ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿರುವುದರಿಂದ 199 ಸ್ಥಾನಗಳಲ್ಲಿ ಮತದಾನ ನಡೆಯುತ್ತಿದೆ. 

199 ವಿಧಾನಸಭಾ ಕ್ಷೇತ್ರಗಳಲ್ಲಿ 5,26,90,146 ಮತದಾರರಿದ್ದಾರೆ. ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕಣದಲ್ಲಿರುವ 1,862 ಅಭ್ಯರ್ಥಿಗಳ ಪೈಕಿ ಕೆಲವು ಪ್ರಮುಖ ಮುಖಗಳೆಂದರೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (ಸರ್ದಾರ್‌ಪುರ), ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ (ಟೋಂಕ್), ರಾಜ್ಯ ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ (ಲಚ್‌ಮಾಂಗಢ), ಬಿಜೆಪಿಯ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ( ಝಲ್ರಾಪಟನ್), ಆರ್ ಲ್ಪಿ ಸಂಚಾಲಕ ಹನುಮಾನ್ ಬೇನಿವಾಲ್ (ಖಿನ್ವ್ಸರ್).

ರಾಜ್ಯಾದ್ಯಂತ 1.70 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 70,000 ರಾಜಸ್ಥಾನ ಪೊಲೀಸ್ ಸಿಬ್ಬಂದಿ, 18,000 ರಾಜಸ್ಥಾನ ಗೃಹರಕ್ಷಕರು, 2,000 ರಾಜಸ್ಥಾನ ಗಡಿ ಗೃಹರಕ್ಷಕರು, 15,000 ಇತರ ರಾಜ್ಯಗಳಿಂದ (ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ಮಧ್ಯಪ್ರದೇಶ) ಗೃಹ ರಕ್ಷಕರು ಮತ್ತು 120 RAC ಕಂಪನಿಗಳನ್ನು ದಿನಕ್ಕೆ ನಿಯೋಜಿಸಲಾಗಿದೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖ ಚಿರಂಜೀವಿ ಆರೋಗ್ಯ ವಿಮೆಯ ಅಡಿಯಲ್ಲಿ ವಿಮಾ ಮೊತ್ತವನ್ನು 25 ಲಕ್ಷದಿಂದ 50 ಲಕ್ಷಕ್ಕೆ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತು, 4 ಲಕ್ಷ ಸರ್ಕಾರಿ ಉದ್ಯೋಗಗಳು ಸೇರಿದಂತೆ 10 ಲಕ್ಷ ಉದ್ಯೋಗಗಳು ಮತ್ತು ಹಳೆಯ ಪಿಂಚಣಿ ಯೋಜನೆಯನ್ನು. ಮತ್ತೆ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವ ಬಗ್ಗೆಯೂ ಒತ್ತು ನೀಡಿದೆ.

ಕಳೆದ 25 ವರ್ಷಗಳಿಂದ ರಾಜಸ್ಥಾನದಲ್ಲಿ ಯಾವುದೇ ರಾಜಕೀಯ ಪಕ್ಷವು ಎರಡನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಂಡಿಲ್ಲದ ಕಾರಣ, ಈ ಬಾರಿ 1998ರಿಂದ ಐದು ವರ್ಷಗಳಿಗೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೆ ಬರುತ್ತಿವೆ. ಆಡಳಿತಾರೂಢ ಕಾಂಗ್ರೆಸ್ ರಾಜಸ್ಥಾನದಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರೆ, ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವತ್ತ ಕಣ್ಣಿಟ್ಟಿದೆ.

Related Stories

No stories found.

Advertisement

X
Kannada Prabha
www.kannadaprabha.com