ಜೆಯು ರ್‍ಯಾಗಿಂಗ್ , ಸಾವು ಪ್ರಕರಣ: ವಿವಿಯ 6 ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ ಪ್ರವೇಶ ನಿರ್ಬಂಧ

ಆಗಸ್ಟ್‌ನಲ್ಲಿ ರ್‍ಯಾಗಿಂಗ್ ನಿಂದ  ಹೊಸ ವಿದ್ಯಾರ್ಥಿಯ ಸಾವಿನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜಾದವ್‌ಪುರ ವಿಶ್ವವಿದ್ಯಾಲಯದ (ಜೆಯು) ಆರು ವಿದ್ಯಾರ್ಥಿಗಳಿಗೆ ಅನಿರ್ದಿಷ್ಟಾವಧಿಗೆ ಕ್ಯಾಂಪಸ್‌ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.
ಜಾದವ್ ಪುರ ವಿಶ್ವವಿದ್ಯಾಲಯ
ಜಾದವ್ ಪುರ ವಿಶ್ವವಿದ್ಯಾಲಯ

ಕೊಲ್ಕತ್ತಾ: ಆಗಸ್ಟ್‌ನಲ್ಲಿ ರ್‍ಯಾಗಿಂಗ್ ನಿಂದ  ಹೊಸ ವಿದ್ಯಾರ್ಥಿಯ ಸಾವಿನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜಾದವ್‌ಪುರ ವಿಶ್ವವಿದ್ಯಾಲಯದ (ಜೆಯು) ಆರು ವಿದ್ಯಾರ್ಥಿಗಳಿಗೆ ಅನಿರ್ದಿಷ್ಟಾವಧಿಗೆ ಕ್ಯಾಂಪಸ್‌ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ವಿಶ್ವವಿದ್ಯಾನಿಲಯದ ರ್‍ಯಾಗಿಂಗ್ ವಿರೋಧಿ ಸಮಿತಿಯು ವಿದ್ಯಾರ್ಥಿಗಳನ್ನು ಇನ್‌ಸ್ಟಿಟ್ಯೂಟ್‌ಗೆ ಪ್ರವೇಶಿಸುವುದನ್ನು ತಡೆಯಬೇಕೆಂದು ಶಿಫಾರಸು ಮಾಡಿದ ಸುಮಾರು ಎರಡು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಅವರೆಲ್ಲರೂ ಪ್ರಸ್ತುತ ಪ್ರೆಸಿಡೆನ್ಸಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಮ್ಮ ವಿರುದ್ಧದ ಎಲ್ಲಾ ಆರೋಪಗಳಿಂದ  ಬಿಡುಗಡೆಗೊಳ್ಳುವವರೆಗೆ ಆರು ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳು ಸೇರಿದಂತೆ ಕ್ಯಾಂಪಸ್‌ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ನವೆಂಬರ್ 24 ರಂದು ಜೆಯು ರಿಜಿಸ್ಟ್ರಾರ್ ಸ್ನೇಹಮಂಜು ಬಸು ಹೇಳಿದ್ದರು. 

ವಿಶ್ವವಿದ್ಯಾನಿಲಯದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಕಾರ್ಯಕಾರಿ ಮಂಡಳಿಯು ಅಕ್ಟೋಬರ್‌ನಲ್ಲಿ ಆರು ವಿದ್ಯಾರ್ಥಿಗಳನ್ನು ನಿಷೇಧಿಸುವ ಸಮಿತಿಯ ಶಿಫಾರಸನ್ನು ಅನುಮೋದಿಸಿದ್ದರೂ, ಕೆಲವೇ ದಿನಗಳ ಹಿಂದೆಯಷ್ಟೇ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಬಸು ಅವರ ಕಚೇರಿಯಿಂದ ಅಧಿಸೂಚನೆ ಹೊರಡಿಸಲು ವಿಳಂಬವಾದುದ್ದಕ್ಕೆ ಕಾರಣ ತಿಳಿದುಬಂದಿಲ್ಲ. 

ತೀವ್ರ ರ್‍ಯಾಗಿಂಗ್ ನಂತರ ಆಗಸ್ಟ್ 9 ರಂದು ಜೆಯು ಮುಖ್ಯ ಹಾಸ್ಟೆಲ್‌ನ ಎರಡನೇ ಮಹಡಿಯ ಬಾಲ್ಕನಿಯಿಂದ ಫ್ರೆಶರ್ ಬಿದ್ದಿದ್ದರು. ಮರುದಿನ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು, ಪಿಹೆಚ್ ಡಿ ಸಂಶೋಧಕರೊಬ್ಬರು ಸೇರಿದಂತೆ ಇದುವರೆಗೆ 13 ವ್ಯಕ್ತಿಗಳನ್ನು ಬಂಧಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com