ಸಿಲ್ಕ್ಯಾರ ಟನಲ್ ಮೇಲ್ಭಾಗದಲ್ಲಿ ಲಂಬ ಕೊರೆಯುವಿಕೆ ಆರಂಭ: ರಕ್ಷಣಾ ಕಾರ್ಯಾಚರಣೆಗೆ ಸೇನೆ ನೆರವು

ಉತ್ತರಕಾಶಿಯಲ್ಲಿ ಕುಸಿತ ಕಂಡಿರುವ ಸಿಲ್ಕ್ಯಾರ ಟನಲ್ ನಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವುದಕ್ಕಾಗಿ ಟನಲ್ ಮೇಲ್ಭಾಗದಿಂದ ಲಂಬ ಕೊರೆಯುವಿಕೆ ಆರಂಭವಾಗಿದೆ. 
ಸಿಲ್ಕ್ಯಾರ ಟನಲ್
ಸಿಲ್ಕ್ಯಾರ ಟನಲ್

ಉತ್ತರಾಖಂಡ್: ಉತ್ತರಕಾಶಿಯಲ್ಲಿ ಕುಸಿತ ಕಂಡಿರುವ ಸಿಲ್ಕ್ಯಾರ ಟನಲ್ ನಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವುದಕ್ಕಾಗಿ ಟನಲ್ ಮೇಲ್ಭಾಗದಿಂದ ಲಂಬ ಕೊರೆಯುವಿಕೆ ಆರಂಭವಾಗಿದೆ. 

ವರ್ಟಿಕಲ್ ಡ್ರಿಲಿಂಗ್ ಗಾಗಿ ಎರಡು ನಿರ್ದಿಷ್ಟ ಸ್ಥಳಗಳನ್ನು ಗುರುತು ಮಾಡಲಾಗಿತ್ತು. ಎಸ್ ಜೆವಿಎನ್ ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆ ವರ್ಟಿಕಲ್ ಡ್ರಿಲ್ಲಿಂಗ್ ನ್ನು ಆರಂಭಿಸಿದೆ. ಈ ನಡುವೆ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ಸೇನೆಯೂ ಧಾವಿಸಿದೆ. 

ನ.12 ರಂದು ಟನಲ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ಟನಲ್ ಭಾಗಶಃ ಕುಸಿದಿದ್ದು ಕಾರ್ಮಿಕರು ಹೊರಬರಲು ಸಾಧ್ಯವಾಗದೇ ಒಳಗೆ ಸಿಲುಕಿದ್ದಾರೆ.

ಇದೇ ವೇಳೆ ಸೇನೆ ಮಾನಸಂಪನ್ಮೂಲ ಬಳಸಿಕೊಂಡು ಟನಲ್ ಡ್ರಿಲ್ಲಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದೆ. ಸೇನೆಯ ಮದ್ರಾಸ್ ಸ್ಯಾಪರ್ಸ್ ಈ ಕಾರ್ಯಾಚರಣೆಯನ್ನು ನಡೆಸಲಿದೆ ಮತ್ತು ಅವರ 20 ಸದಸ್ಯರ ತುಕಡಿಯನ್ನು ಹಿರಿಯ ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಇದಕ್ಕೂ ಮುನ್ನ  ಸುರಂಗ ಕೊರೆಯುತ್ತಿದ್ದ ಮಾರ್ಗ ಮಧ್ಯೆ ಮತ್ತೆ ಅಡ್ಡಿ ಎದುರಾಗಿದ್ದು ಕೊರೆಯುವ ಕಾರ್ಯವನ್ನು ಮತ್ತೆ ಸ್ಥಗಿತಗೊಳಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com