ಕಾಂಗ್ರೆಸ್‌ನ 'ಕೊಳಕು ರಾಜಕೀಯ' ಬಹಿರಂಗ: 'ರೈತು ಬಂಧು' ತಡೆಗೆ ಚುನಾವಣಾ ಆಯೋಗಕ್ಕೆ 'ಕೈ' ಪತ್ರ; ಕವಿತಾ ವಾಗ್ದಾಳಿ!

ರೈತ ಬಂಧು ಯೋಜನೆಯಡಿ ಫಲಾನುಭವಿಗಳಿಗೆ ಹಣ ಪಾವತಿ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಡೆಯುವಂತೆ ಕೋರಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಆರ್‌ಎಸ್ ಎಂಎಲ್‌ಸಿ ಕೆ.ಕವಿತಾ...
ಕೆ ಕವಿತಾ
ಕೆ ಕವಿತಾ

ಹೈದರಾಬಾದ್: ರೈತ ಬಂಧು ಯೋಜನೆಯಡಿ ಫಲಾನುಭವಿಗಳಿಗೆ ಹಣ ಪಾವತಿ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಡೆಯುವಂತೆ ಕೋರಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಕ್ಕೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಆರ್‌ಎಸ್ ಎಂಎಲ್‌ಸಿ ಕೆ.ಕವಿತಾ ಕಾಂಗ್ರೆಸ್ ನ ಕೊಳಕು ರಾಜಕಾರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ಹೇಳಿದ್ದಾರೆ.

ರೈತರಿಗೆ ಆರ್ಥಿಕ ನೆರವು ವಿತರಣೆಗೆ ತೆಲಂಗಾಣ ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ಚುನಾವಣಾ ಆಯೋಗದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅವರು, ಯೋಜನೆಯು ಚುನಾವಣಾ ಭರವಸೆಯಲ್ಲ. ಆದರೆ ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ಕೊಳಕು ರಾಜಕಾರಣ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅವರು ರೈತ ಬಂಧು ಪಾವತಿಯನ್ನು ವಿಳಂಬ ಮಾಡುತ್ತಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಿದೆ. ಇದು ಚುನಾವಣಾ ಭರವಸೆಯಲ್ಲ. ಇದು ಚುನಾವಣೆಗಾಗಿ ಮಾಡಿರುವ ಹೊಸ ಕಾರ್ಯಕ್ರಮವಲ್ಲ ಎಂದು ಹೇಳಿದರು.

ಕಳೆದ 10 ಬೆಳೆ ಹಂಗಾಮಿನಲ್ಲಿ ಬಿಆರ್‌ಎಸ್ ಸರ್ಕಾರ 65 ಲಕ್ಷ ರೈತರಿಗೆ 72,000 ಕೋಟಿ ರೂಪಾಯಿ ನೆರವು ನೀಡಿರುವ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ಪದೇ ಪದೇ ದೂರುತ್ತಿದೆ ಎಂದು ಕವಿತಾ ಹೇಳಿದರು. ರೈತ ಬಂಧು ಮತ್ತು ರೈತರ ಸಾಲ ಮನ್ನಾ ಅಡಿಯಲ್ಲಿ ಪಾವತಿಗಳನ್ನು ಕಸಿದುಕೊಂಡಿರುವ ಕಾಂಗ್ರೆಸ್ 'ಶತ್ರು' ಎಂಬ ವಾಸ್ತವವನ್ನು ಅರ್ಥಮಾಡಿಕೊಳ್ಳಲು ರಾಜ್ಯದ ರೈತರಿಗೆ ವಿನಂತಿಸುತ್ತೇನೆ ಎಂದು ಬಿಆರ್‌ಎಸ್ ನಾಯಕಿ ಹೇಳಿದರು.

ಬಿಆರ್ ಎಸ್ ಸರ್ಕಾರವು ರೈತ ಬಂಧು ಯೋಜನೆಯಡಿ ತೆಲಂಗಾಣದ ರೈತರು ಪ್ರತಿ ಹಂಗಾಮಿನಲ್ಲಿ ತಲಾ 5,000 ರೂ. ಅಂದರೆ ವಾರ್ಷಿಕವಾಗಿ ಎಕರೆಗೆ ಒಟ್ಟು 10,000 ರೂಪಾಯಿ ನೀಡುತ್ತಿರುವುದನ್ನು ನಿಷೇಧಿಸುವಂತೆ ಕಾಂಗ್ರೆಸ್ ಭಾನುವಾರ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿದ್ದು, ಪಕ್ಷವು ತನ್ನ ಚುನಾವಣಾ ಪ್ರಚಾರದಲ್ಲಿ ರೈತ ಬಂಧು ಹಣ ಹಂಚಿಕೆಯನ್ನು ಉಲ್ಲೇಖಿಸಿಲ್ಲ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com