ಪನ್ನುನ್ ಹತ್ಯೆಗೆ ಭಾರತದ ಪ್ರಜೆಯಿಂದ ಸಂಚು: ಅಮೆರಿಕ ಆರೋಪ

ಸಿಖ್ಖರಿಗೆ ಸಾರ್ವಭೌಮ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿರುವ ಅಮೆರಿಕದ ಪ್ರಜೆ, ಸಿಖ್ ಫಾರ್ ಜಸ್ಟಿಸ್ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪವನ್ನು ಭಾರತೀಯ ಪ್ರಜೆ ಮೇಲೆ ಅಮೆರಿಕ ಹೊರಿಸಿದೆ. 
ಪನ್ನುನ್
ಪನ್ನುನ್

ನವದೆಹಲಿ: ಸಿಖ್ಖರಿಗೆ ಸಾರ್ವಭೌಮ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿರುವ ಅಮೆರಿಕದ ಪ್ರಜೆ, ಸಿಖ್ ಫಾರ್ ಜಸ್ಟಿಸ್ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ ಆರೋಪವನ್ನು ಭಾರತೀಯ ಪ್ರಜೆ ಮೇಲೆ ಅಮೆರಿಕ ಹೊರಿಸಿದೆ. 
ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬಾತನ ಮೇಲೆ ಕೊಲೆಗಾಗಿ ಗರಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಆರೋಪ ಹೊರಿಸಲಾಗಿದೆ ಎಂದು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಯುಎಸ್ ಅಟಾರ್ನಿ ಮ್ಯಾಥ್ಯೂ ಜಿ ಓಲ್ಸೆನ್ ಹೇಳಿದ್ದಾರೆ. 

ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿರುವ ಸಿಖ್ ಪ್ರತ್ಯೇಕತಾವಾದಿ ನಾಯಕನನ್ನು ಕೊಲ್ಲಲು ಹಂತಕನಿಗೆ  100,000 ಅಮೆರಿಕನ್ ಡಾಲರ್ ಪಾವತಿಸಲು ಗುಪ್ತಾ ಒಪ್ಪಿಕೊಂಡಿದ್ದಾನೆ ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. "ಜೂನ್ 9, 2023 ರಂದು ಗುಪ್ತಾ ಕೊಲೆಗೆ ಮುಂಗಡ ಪಾವತಿಯಾಗಿ ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಯುಸಿಯಲ್ಲಿ 15,000 ಅಮೆರಿಕನ್ ಡಾಲರ್ ನ್ನು ಹಂತಕನಿಗೆ ವ್ಯವಸ್ಥೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 

ಕಳೆದ ವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿಯನ್ನು ಕೊಲ್ಲುವ ಸಂಚನ್ನು ಅಮೆರಿಕದ ಅಧಿಕಾರಿಗಳು ಸಂಚುಗೊಳಿಸಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ಈ  ಕೃತ್ಯದಲ್ಲಿ ಭಾರತ ಸರ್ಕಾರ ಭಾಗಿಯಾಗಿರುವ ಕಳವಳಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ಈ ಬೆಳವಣಿಗೆ ನಡೆದ ಬೆನ್ನಲ್ಲೇ ಭಾರತೀಯ ಪ್ರಜೆ ವಿರುದ್ಧ ಆರೋಪ ಹೊರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com