2022-23 ಹಣಕಾಸು ವರ್ಷದಲ್ಲಿ 720 ಕೋಟಿ ರೂ. ದೇಣಿಗೆ ಪಡೆದ ಬಿಜೆಪಿ: ಚುನಾವಣಾ ಆಯೋಗ

2022-23ರ ಹಣಕಾಸು ವರ್ಷದಲ್ಲಿ ಬಿಜೆಪಿ ತನ್ನ ಘಟಕಗಳು, ಚುನಾವಣಾ ಟ್ರಸ್ಟ್‌ಗಳು, ವ್ಯಕ್ತಿಗಳು ಮತ್ತು  ಶಾಸಕರಿಂದ ಸುಮಾರು 720 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2022-23ರ ಹಣಕಾಸು ವರ್ಷದಲ್ಲಿ ಬಿಜೆಪಿ ತನ್ನ ಘಟಕಗಳು, ಚುನಾವಣಾ ಟ್ರಸ್ಟ್‌ಗಳು, ವ್ಯಕ್ತಿಗಳು ಮತ್ತು  ಶಾಸಕರಿಂದ ಸುಮಾರು 720 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿದೆ.

ಬಿಜೆಪಿ ಈ ವರ್ಷದ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೇಣಿಗೆ ವರದಿಯನ್ನು ಗುರುವಾರ ಚುನಾವಣಾ ಸಮಿತಿಯು ಸಾರ್ವಜನಿಕವಾಗಿ ಪ್ರಕಟಿಸಿದೆ. ಈ ವರದಿ ಪ್ರಕಾರ ಆಡಳಿತಾರೂಢ ಪಕ್ಷ ರೂ. 719. 83 ಕೋಟಿ ದೇಣಿಗೆ ಪಡೆದುಕೊಂಡಿದೆ. 

ಭಾರ್ತಿ ಎಂಟರ್‌ಪ್ರೈಸಸ್ ಬೆಂಬಲಿತ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ 254.75 ಕೋಟಿ ರೂ. ದೇಣಿಗೆ ನೀಡಿದೆ. ಟ್ರಸ್ಟ್‌ನ ಕೊಡುಗೆಗಳನ್ನು ಬಹು ಕಂತುಗಳಲ್ಲಿ ನೀಡಲಾಗಿದೆ ಎಂದು ವರದಿ ಹೇಳಿದೆ.

ಒಂದು ಹಣಕಾಸು ವರ್ಷದಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದ ದಾನಿಗಳ ವಿವರಗಳನ್ನು ರಾಜಕೀಯ ಪಕ್ಷಗಳು ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com