ಜ್ಞಾನವಾಪಿ ಸಮೀಕ್ಷಾ ವರದಿ: ಅಂಜುಮನ್ ಸಮಿತಿ ಆಕ್ಷೇಪಣೆ ತಿರಸ್ಕೃತ, ಎಎಸ್‌ಐಗೆ ಮತ್ತೆ 10 ದಿನಗಳ ಕಾಲಾವಕಾಶ!

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಜ್ಞಾನವಾಪಿ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಇನ್ನೂ ಹತ್ತು ದಿನಗಳ ಕಾಲಾವಕಾಶ ನೀಡಿದೆ.
ಜ್ಞಾನವ್ಯಾಪಿ ಆವರಣ
ಜ್ಞಾನವ್ಯಾಪಿ ಆವರಣ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಜ್ಞಾನವಾಪಿ ಸಮೀಕ್ಷೆಯ ವರದಿಯನ್ನು ಸಲ್ಲಿಸಲು ಇನ್ನೂ ಹತ್ತು ದಿನಗಳ ಕಾಲಾವಕಾಶ ನೀಡಿದೆ. ಪದೇ ಪದೇ ಸಮಯ ಕೇಳುತ್ತಿರುವುದಕ್ಕೆ ಮುಸ್ಲಿಂ ಕಡೆಯ ಅಂಜುಮನ್ ಸಮಿತಿ ಕೂಡ ಆಕ್ಷೇಪ ವ್ಯಕ್ತಪಡಿಸಿ ಎಎಸ್‌ಐ ಬೇಡಿಕೆಯನ್ನು ತಿರಸ್ಕರಿಸುವಂತೆ ಮನವಿ ಮಾಡಿತ್ತು.

ಆದರೆ ಜಿಲ್ಲಾ ನ್ಯಾಯಾಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಅವರ ನ್ಯಾಯಾಲಯ ಮುಸ್ಲಿಂ ಕಡೆಯವರ ಮನವಿಯನ್ನು ತಿರಸ್ಕರಿಸಿದ್ದು ಎಎಸ್‌ಐಗೆ ಹತ್ತು ದಿನಗಳ ಕಾಲಾವಕಾಶ ನೀಡುವುದರ ಜತೆಗೆ ಸೂಚನೆಯೊಂದನ್ನು ನೀಡಿದ್ದು ಮುಂದೆ ಎಎಸ್‌ಐ ನ್ಯಾಯಾಲಯದಿಂದ ಸಮಯ ಕೇಳುವುದಿಲ್ಲ ಎಂದು ನಂಬುತ್ತೇವೆ ಎಂದು ಹೇಳಿ ಮುಂದಿನ ವಿಚಾರಣೆ ಡಿಸೆಂಬರ್ 11ಕ್ಕೆ ಮುಂದೂಡಿದೆ. 

ಸಮೀಕ್ಷಾ ವರದಿಯನ್ನು ಸಲ್ಲಿಸಲು ಎಎಸ್‌ಐ ನ್ಯಾಯಾಲಯದಿಂದ ಮೂರು ವಾರಗಳ ಕಾಲಾವಕಾಶ ಕೋರಿತ್ತು. ಬುಧವಾರ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಎಎಸ್ ಐ ಅರ್ಜಿ ವಿಚಾರಣೆ ನಡೆಯಿತು. ಆಗ ಕೋರ್ಟ್ ಆದೇಶವನ್ನು ಕಾಯ್ದಿರಿಸಿತ್ತು.

ಶೃಂಗಾರ್ ಗೌರಿ ಸೇರಿದಂತೆ ವಿಗ್ರಹಗಳನ್ನು ಪೂಜಿಸುವ ಹಕ್ಕನ್ನು ಕೋರಿ ದೆಹಲಿಯ ರಾಖಿ ಸಿಂಗ್ ಸೇರಿದಂತೆ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಎಎಸ್‌ಐನಿಂದ ಜ್ಞಾನವಾಪಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು. ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯವು ಸರ್ವೆ ನಡೆಸಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಎಎಸ್‌ಐಗೆ ಆದೇಶಿಸಿದೆ. ಈ ಮೊದಲು ಅಕ್ಟೋಬರ್‌ನಲ್ಲಿಯೇ ವರದಿ ಸಲ್ಲಿಸಬೇಕಿತ್ತು. ಆದರೆ ಮಳೆ ಮತ್ತಿತರ ಕಾರಣಗಳನ್ನು ಮುಂದಿಟ್ಟುಕೊಂಡು ಎಎಸ್‌ಐ ವರದಿ ಸಲ್ಲಿಸಲು ಕಾಲಾವಕಾಶ ಕೇಳಿತ್ತು.

ಮಂಗಳವಾರವೂ ಎಎಸ್‌ಐ ಪರವಾಗಿ ವಕೀಲ ಅಮಿತ್ ಶ್ರೀವಾಸ್ತವ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಜಿಪಿಆರ್ ತಂತ್ರಜ್ಞಾನ ಬಳಸಿ ನಡೆಸಿದ ತನಿಖೆಯ ವರದಿ ಇನ್ನೂ ಸಿದ್ಧಗೊಂಡಿಲ್ಲ ಹೀಗಾಗಿ ಸಮೀಕ್ಷಾ ವರದಿ ಸಲ್ಲಿಸಲು ಕಾಲಾವಕಾಶ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು.

ಕಳೆದ ವಿಚಾರಣೆಯಲ್ಲಿ ಸಮೀಕ್ಷಾ ವರದಿ ಸಲ್ಲಿಸುವ ಮುನ್ನ ಎಎಸ್ ಐ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಅರ್ಧಕ್ಕಿಂತ ಹೆಚ್ಚು ಸಮೀಕ್ಷಾ ವರದಿ ಸಿದ್ಧಗೊಂಡಿದ್ದು, ಸಂಪೂರ್ಣ ವರದಿ ಸಿದ್ಧಪಡಿಸಲು ಸಮಯ ಹಿಡಿಯಲಿದೆ. ಆದ್ದರಿಂದ, ಅದನ್ನು ಪ್ರಸ್ತುತಪಡಿಸಲು ಸಮಯ ನೀಡಬೇಕು. ನಂತರ ನ್ಯಾಯಾಲಯ ವರದಿ ಸಲ್ಲಿಸಲು 10 ದಿನಗಳ ಕಾಲಾವಕಾಶ ನೀಡಿದೆ. ಇದಾದ ನಂತರ ಎಎಸ್‌ಐನಿಂದ ಮತ್ತೊಂದು ಅವಧಿ ವಿಸ್ತರಣೆ ಕೋರಲಾಗಿತ್ತು. ಈ ಕುರಿತು ಬುಧವಾರ ವಿಚಾರಣೆ ನಡೆಯಿತು. ಎಎಸ್‌ಐ ಸಮಯಾವಕಾಶ ಕೋರಿಕೆಯನ್ನು ಮುಸ್ಲಿಂ ಕಡೆಯವರು ವಿರೋಧಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com