ನಾರ್ಕೋ-ಭಯೋತ್ಪಾದಕ ಜಾಲ ಭೇದಿಸಿದ ಜಮ್ಮು ಕಾಶ್ಮೀರ ಪೊಲೀಸರು; 300 ಕೋಟಿ ರೂ ಮೌಲ್ಯದ ಕೊಕೇನ್, ಇಬ್ಬರು ವಶಕ್ಕೆ 

ನಾರ್ಕೋ-ಭಯೋತ್ಪಾದಕ ಜಾಲವನ್ನು ಜಮ್ಮು-ಕಾಶ್ಮೀರ ಪೊಲೀಸರು ಭೇದಿಸಿದ್ದು 300 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ನ್ನು ವಶಕ್ಕೆ ಪಡೆದಿದ್ದಾರೆ. 
ವಶಕ್ಕೆ ಪಡೆಯಲಾದ ಡ್ರಗ್ಸ್
ವಶಕ್ಕೆ ಪಡೆಯಲಾದ ಡ್ರಗ್ಸ್

ಶ್ರೀನಗರ: ನಾರ್ಕೋ-ಭಯೋತ್ಪಾದಕ ಜಾಲವನ್ನು ಜಮ್ಮು-ಕಾಶ್ಮೀರ ಪೊಲೀಸರು ಭೇದಿಸಿದ್ದು 300 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ನ್ನು ವಶಕ್ಕೆ ಪಡೆದಿದ್ದಾರೆ. 

ಜಮ್ಮು-ಕಾಶ್ಮೀರದ ರಾಮ್ಬನ್ ಜಿಲ್ಲೆಯಲ್ಲಿ ಡ್ರಗ್ಸ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಪಂಜಾಬ್ ನ ಇಬ್ಬರು ನಿವಾಸಿಗಳನ್ನು ಬಂಧಿಸಲಾಗಿದೆ. ಇದು ಈ ವರ್ಷದಲ್ಲಿ ವಶಕ್ಕೆ ಪಡೆಯಲಾದ ಅತಿ ದೊಡ್ಡ ಪ್ರಮಾಣದ ನಾರ್ಕೊಟಿಕ್ಸ್ ಆಗಿದೆ. ಪ್ರಾರಂಭದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಹೆರಾಯಿನ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ನಂತರದ ತನಿಖೆಯಲ್ಲಿ ಅದು ಕೊಕೇನ್ ಎಂದು ತಿಳಿದುಬಂದಿದೆ. 

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೋಹಿತಾ ಶರ್ಮಾ ನೇತೃತ್ವದ ರಾಂಬನ್ ಪೊಲೀಸರು ಕಾಶ್ಮೀರದಿಂದ ಜಮ್ಮು ಕಡೆಗೆ ಬರುತ್ತಿದ್ದ ರೈಲ್ವೇ ಚೌಕ್ ಬನಿಹಾಲ್‌ನಲ್ಲಿ ಒಂದು ವಾಹನವನ್ನು ತಡೆದು, ಸುಮಾರು 30 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡರು, ಇದು ಅಂತರರಾಷ್ಟ್ರೀಯ ಕಪ್ಪು ಮಾರುಕಟ್ಟೆಯಲ್ಲಿ ಅಂದಾಜು 300 ಕೋಟಿ ರೂ ಬೆಲೆ ಬಾಳುತ್ತದೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com