ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಮಗುವಿಗೆ ಉಸಿರಾಟದ ತೊಂದರೆ; ಇಬ್ಬರು ವೈದ್ಯರಿಂದ ರಕ್ಷಣೆ!

ರಾಂಚಿ-ದೆಹಲಿ ವಿಮಾನದಲ್ಲಿ ತೆರಳುತ್ತಿದ್ದಾಗ ಜನ್ಮಜಾತ ಹೃದ್ರೋಗದಿಂದ ಬಳಲುತ್ತಿದ್ದ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಎದುರಾಗಿದೆ ಈ ವೇಳೆ ವೈದ್ಯರೂ ಆಗಿದ್ದ ಇಬ್ಬರು ಸಹ-ಪ್ರಯಾಣಿಕರು ಮಗುವಿನ ಸಹಾಯಕ್ಕೆ ಬಂದಿದ್ದು ಮಗುವನ್ನು ರಕ್ಷಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ರಾಂಚಿ-ದೆಹಲಿ ವಿಮಾನದಲ್ಲಿ ತೆರಳುತ್ತಿದ್ದಾಗ ಜನ್ಮಜಾತ ಹೃದ್ರೋಗದಿಂದ ಬಳಲುತ್ತಿದ್ದ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಎದುರಾಗಿದೆ ಈ ವೇಳೆ ವೈದ್ಯರೂ ಆಗಿದ್ದ ಇಬ್ಬರು ಸಹ-ಪ್ರಯಾಣಿಕರು ಮಗುವಿನ ಸಹಾಯಕ್ಕೆ ಬಂದಿದ್ದು ಮಗುವನ್ನು ರಕ್ಷಿಸಿದ್ದಾರೆ.

IAS ಅಧಿಕಾರಿ ಡಾ ನಿತಿನ್ ಕುಲಕರ್ಣಿ ಮತ್ತು ರಾಂಚಿ ಸದರ್ ಆಸ್ಪತ್ರೆಯ ವೈದ್ಯ ಡಾ. ಮೊಝಮ್ಮಿಲ್ ಫಿರೋಜ್ ತುರ್ತು ವೈದ್ಯಕೀಯ ಸಹಾಯವಾಗಿ ವಯಸ್ಕರಿಗೆ ಮೀಸಲಾದ ಮಾಸ್ಕ್ ಮತ್ತು ಇತರ ಔಷಧಿಗಳನ್ನು ಬಳಸಿ ಆಮ್ಲಜನಕವನ್ನು ಪೂರೈಸಿದರು. ಒಂದು ಗಂಟೆಯ ನಂತರ ವಿಮಾನ ಲ್ಯಾಂಡ್ ಆದ ನಂತರ, ವೈದ್ಯಕೀಯ ತಂಡವು ಮಗುವನ್ನು ತಮ್ಮ ಆರೈಕೆಗೆ ತೆಗೆದುಕೊಂಡು ಆಮ್ಲಜನಕವನ್ನು ಒದಗಿಸಿತು. ಮಗುವಿನ ಹೃದಯ ಕಾಯಿಲೆಯ ಚಿಕಿತ್ಸೆಗಾಗಿ ಪೋಷಕರು ಮಗುವನ್ನು ದೆಹಲಿಯ ಏಮ್ಸ್‌ಗೆ ಕರೆದೊಯ್ಯುತ್ತಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶ: ಶಾಲಾ ಬಸ್ ಪಲ್ಟಿಯಾಗಿ 12 ವಿದ್ಯಾರ್ಥಿಗಳಿಗೆ ಗಾಯ, 4 ಮಂದಿ ಚಿಂತಾಜನಕ
 
ದೆಹಲಿಗೆ ಹಾರಿದ ಇಪ್ಪತ್ತು ನಿಮಿಷಗಳ ನಂತರ ಇಂಡಿಗೋ ವಿಮಾನದ ಸಿಬ್ಬಂದಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ತೊಂದರೆಯಲ್ಲಿರುವ ಮಗುವಿಗೆ ವಿಮಾನದಲ್ಲಿದ್ದ ವೈದ್ಯರಿಂದ ವೈದ್ಯಕೀಯ ಸಹಾಯವನ್ನು ಪಡೆದರು. ಪ್ರಸ್ತುತ ಜಾರ್ಖಂಡ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಕುಲಕರ್ಣಿ ಮತ್ತು ರಾಂಚಿಯ ಸದರ್ ಆಸ್ಪತ್ರೆಯ ಡಾ. ಮೊಝಮ್ಮಿಲ್ ಫಿರೋಜ್ ಮಗುವನ್ನು ಉಳಿಸಲು ಮುಂದೆ ಬಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com