ವಂದೇ ಭಾರತ್ ಎಕ್ಸ್‌ಪ್ರೆಸ್ ಹಳಿ ಮೇಲೆ ಕಲ್ಲುಗಳು-ಕಬ್ಬಿಣದ ರಾಡ್‌ಗಳನ್ನಿಟ್ಟ ಕಿಡಿಗೇಡಿಗಳು, ವಿಡಿಯೋ
ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರಿ ಅಪಘಾತದಿಂದ ಪಾರಾಗಿದೆ. ಲೊಕೊ ಪೈಲಟ್‌ನ ಸಮಯಪ್ರಜ್ಞೆಯಿಂದ ಈ ಅನಾಹುತ ತಪ್ಪಿದೆ.
ಗಂಗ್ರಾರ್-ಸೋನಿಯಾನಾ ನಡುವಿನ ವಂದೇ ಭಾರತ್ ರೈಲಿನ ಮಾರ್ಗದಲ್ಲಿ ದುಷ್ಕರ್ಮಿಗಳು ರೈಲು ಹಳಿ ಮೇಲೆ ಕಲ್ಲುಗಳು ಮತ್ತು ಕಬ್ಬಿಣದ ರಾಡ್‌ಗಳನ್ನು ಹಾಕಿದ್ದಾರೆ. ಇದನ್ನು ರೈಲ್ವೆ ಹಳಿಗಳ ಮೇಲೆ ದೂರದವರೆಗೆ ಇಡಲಾಗಿದೆ. ಒಂದು ವೇಳೆ ರೈಲು ಹಾದು ಹೋಗಿದ್ದರೆ ಭಾರೀ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಬೆಳಗ್ಗೆ 9:55ರ ಸುಮಾರಿಗೆ ಈ ಘಟನೆ ನಡೆದಿದೆ. ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉದಯಪುರ-ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಲೊಕೊಮೊಟಿವ್ ಪೈಲಟ್‌ಗಳು ಸಮಯಕ್ಕೆ ಸರಿಯಾಗಿ ಟ್ರ್ಯಾಕ್‌ನಲ್ಲಿ ಕಲ್ಲುಗಳು ಮತ್ತು ಕಬ್ಬಿಣದ ರಾಡ್‌ಗಳನ್ನು ಗುರುತಿಸಿದರು. ನಂತರ ರೈಲು ಅದರ ಮೇಲೆ ಹೋಗದಂತೆ ತುರ್ತು ಬ್ರೇಕ್‌ಗಳನ್ನು ಹಾಕಿದರು. ಇದರಿಂದಾಗಿ ಅನಾಹುತ ತಪ್ಪಿದೆ.
ರೈಲಿನಿಂದ ಇಳಿದ ನಂತರ, ಲೊಕೊ ಪೈಲಟ್‌ಗಳು ರೈಲಿನ ಮೇಲಿನ ಕಲ್ಲುಗಳು ಮತ್ತು ಕಬ್ಬಿಣದ ರಾಡ್ ಗಳನ್ನು ತೆರವುಗೊಳಿಸಿದರು. ಅಲ್ಲದೆ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ