ಬಿಗ್ ಬಿಲಿಯನ್ ಡೇಸ್ ಜಾಹೀರಾತು ವಿವಾದ: ಅಮಿತಾಬ್ ಬಚ್ಚನ್-ಫ್ಲಿಪ್‌ಕಾರ್ಟ್ ವಿರುದ್ಧ ದೂರು, 10 ಲಕ್ಷ ದಂಡಕ್ಕೆ ಒತ್ತಾಯ!

ಮೆಗಾಸ್ಟಾರ್ ಅಬಿತಾಬ್ ಬಚ್ಚನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧ ಟ್ರೇಡರ್ಸ್ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ (ಸಿಎಐಟಿ) ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ದೂರು ಸಲ್ಲಿಸಿದೆ.
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಮೆಗಾಸ್ಟಾರ್ ಅಬಿತಾಬ್ ಬಚ್ಚನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧ ಟ್ರೇಡರ್ಸ್ ಸಂಘಟನೆಯಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ (ಸಿಎಐಟಿ) ಗ್ರಾಹಕ ವ್ಯವಹಾರಗಳ ಸಚಿವಾಲಯಕ್ಕೆ ದೂರು ಸಲ್ಲಿಸಿದೆ.

ಬಚ್ಚನ್ ಕೆಲಸ ಮಾಡಿರುವ ಫ್ಲಿಪ್‌ಕಾರ್ಟ್‌ನ ಮುಂಬರುವ ಬಿಗ್ ಬಿಲಿಯನ್ ಡೇ ಮಾರಾಟದ ಕುರಿತು ಬಿಡುಗಡೆಯಾದ ಜಾಹೀರಾತನ್ನು ತಪ್ಪುದಾರಿಗೆಳೆಯುವಂತಿದೆ ಎಂದು CAT ಬಣ್ಣಿಸಿದೆ.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರಕ್ಕೆ(ಸಿಸಿಪಿಎ) ನೀಡಿರುವ ದೂರಿನಲ್ಲಿ ಸಿಎಟಿ ಜಾಹೀರಾತು ದೇಶದ ಸಣ್ಣ ವ್ಯಾಪಾರಿಗಳ ವಿರುದ್ಧದ ಜಾಹೀರಾತು ಎಂದು ಬಣ್ಣಿಸಿದ್ದು, ಜಾಹೀರಾತನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.

ಗ್ರಾಹಕ ಸಂರಕ್ಷಣಾ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಜಾಹೀರಾತಿಗಾಗಿ ಫ್ಲಿಪ್‌ಕಾರ್ಟ್‌ಗೆ ದಂಡ ಮತ್ತು ಬಚ್ಚನ್‌ಗೆ 10 ಲಕ್ಷ ರೂಪಾಯಿ ದಂಡ ವಿಧಿಸಬೇಕೆಂದು ಸಂಸ್ಥೆ ಒತ್ತಾಯಿಸಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯೆಯನ್ನು ಕೋರಿ ಇಮೇಲ್‌ಗೆ ಫ್ಲಿಪ್‌ಕಾರ್ಟ್ ಪ್ರತಿಕ್ರಿಯಿಸಲಿಲ್ಲ, ಆದರೆ ಬಚ್ಚನ್ ಅವರನ್ನು ಸಂಪರ್ಕಿಸಲಾಗಲಿಲ್ಲ.

ಫ್ಲಿಪ್‌ಕಾರ್ಟ್ ಬೆಲೆಗೆ ಸಂಬಂಧಿಸಿದಂತೆ ಗೊಂದಲ ಸೃಷ್ಟಿ
ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ಮೊಬೈಲ್‌ಗಳಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ ಡೀಲ್‌ಗಳು ಚಿಲ್ಲರೆ ಅಂಗಡಿಗಳಲ್ಲಿ ಆಫ್‌ಲೈನ್‌ನಲ್ಲಿ ಲಭ್ಯವಿರುವುದಿಲ್ಲ ಎಂದು ಜಾಹೀರಾತಿನ ಒಂದು ಸ್ಥಳದಲ್ಲಿ ಬಚ್ಚನ್ ಗ್ರಾಹಕರಿಗೆ ಹೇಳುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. Flipkart ಬಚ್ಚನ್ ಮೂಲಕ ಗ್ರಾಹಕರಲ್ಲಿ ಬೆಲೆಗಳ ಬಗ್ಗೆ ಗೊಂದಲವನ್ನು ಹರಡುತ್ತಿದೆ. ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು CAT ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com