ಮೋದಿ ಮೊದಲ ಒಬಿಸಿ ಪ್ರಧಾನಿಯೇ? ವೋಟ್ ಬ್ಯಾಂಕ್ ರಾಜಕೀಯ ಮಾಡಬೇಡಿ: ಕಪಿಲ್ ಸಿಬಲ್ ವಾಗ್ದಾಳಿ

ರಾಜಸ್ಥಾನದಲ್ಲಿ ವೋಟ್ ಬ್ಯಾಂಕ್ ಗಾಗಿ ಅಲ್ಲ, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗಳ ಬಗ್ಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಶುಕ್ರವಾರ ವಾಗ್ದಾಳಿ ನಡೆಸಿದ್ದು,  ಬಿಜೆಪಿ ಮೋದಿಯನ್ನು ಮೊದಲ ಒಬಿಸಿ ಪ್ರಧಾನಿ ಎಂದು ಬಿಂಬಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ, ಕಪಿಲ್ ಸಿಬಲ್ ಸಾಂದರ್ಭಿಕ ಚಿತ್ರ
ಪ್ರಧಾನಿ ಮೋದಿ, ಕಪಿಲ್ ಸಿಬಲ್ ಸಾಂದರ್ಭಿಕ ಚಿತ್ರ

ನವದೆಹಲಿ: ರಾಜಸ್ಥಾನದಲ್ಲಿ ವೋಟ್ ಬ್ಯಾಂಕ್ ಗಾಗಿ ಅಲ್ಲ, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗಳ ಬಗ್ಗೆ ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಶುಕ್ರವಾರ ವಾಗ್ದಾಳಿ ನಡೆಸಿದ್ದು, ಬಿಜೆಪಿ ಮೋದಿಯನ್ನು ಮೊದಲ ಒಬಿಸಿ ಪ್ರಧಾನಿ ಎಂದು ಬಿಂಬಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯ ಮಾಡಬೇಡಿ ಎಂದಿದ್ದಾರೆ. 

ಗುರುವಾರ ಜೋಧ್‌ಪುರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ರಾಜ್ಯದಲ್ಲಿ ಹೂಡಿಕೆ ಮತ್ತು ವ್ಯಾಪಾರದಲ್ಲಿ ಯಾವುದೇ ನಷ್ಟವಾಗಲ್ಲ. ಆದರೆ ಕಾಂಗ್ರೆಸ್ ರಾಜಸ್ಥಾನದ ಯೋಗಕ್ಷೇಮಕ್ಕಿಂತ ತನ್ನ ವೋಟ್ ಬ್ಯಾಂಕ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಎಂದು ಹೇಳಿದ್ದರು. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಿಬಲ್, ಕಾಂಗ್ರೆಸ್‌ಗೆ ವೋಟ್ ಬ್ಯಾಂಕ್ ಚಿಂತೆಯಿದೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಅಲ್ಲ. ಮೋದಿಜಿ: ಕಾನೂನು ಎಲ್ಲಿದೆ? ಸುವ್ಯವಸ್ಥೆ ಏಲ್ಲಿದೆ? ಇಡಿ ಮತ್ತು ಸಿಬಿಐ ಕಾನೂನಾ? ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. "ಬಿಜೆಪಿ, ಮೋದಿ ಅವರನ್ನು ಮೊದಲ ಒಬಿಸಿ ಪ್ರಧಾನಿಯೇ? ಮತ ಬ್ಯಾಂಕ್ ರಾಜಕೀಯ ಮಾಡಬೇಡಿ ಎಂದಿದ್ದಾರೆ.  

ಯುಪಿಎ I ಮತ್ತು II ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್, ಕಳೆದ ವರ್ಷ ಮೇನಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಉದ್ದೇಶದಿಂದ ಅವರು 'ಇನ್ಸಾಫ್' ಎಂಬ ಚುನಾವಣಯೇತರ ವೇದಿಕೆ ಹುಟ್ಟುಹಾಕಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com