ಟೆಲ್ ಅವೀವ್‌ಗೆ ಹೊರಡುವ, ಅಲ್ಲಿಂದ ಬರುವ ವಿಮಾನಗಳನ್ನು ರದ್ದುಗೊಳಿಸಿದ ಏರ್ ಇಂಡಿಯಾ

ಹಮಾಸ್ ಉಗ್ರರು ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಠ 198 ಮಂದಿ ಮೃತಪಟ್ಟಿದ್ದು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಅಕ್ಟೋಬರ್ 7 ರಂದು ದೆಹಲಿಯಿಂದ ಟೆಲ್ ಅವೀವ್​​...
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ನವದೆಹಲಿ: ಹಮಾಸ್ ಉಗ್ರರು ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಠ 198 ಮಂದಿ ಮೃತಪಟ್ಟಿದ್ದು, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಅಕ್ಟೋಬರ್ 7 ರಂದು ದೆಹಲಿಯಿಂದ ಟೆಲ್ ಅವೀವ್​​ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳನ್ನು ರದ್ದುಗೊಳಿಸಿದೆ. 

"ನಮ್ಮ ಅತಿಥಿಗಳು ಮತ್ತು ಸಿಬ್ಬಂದಿಯ ಹಿತಾಸಕ್ತಿ ಮತ್ತು ಸುರಕ್ಷತೆಗಾಗಿ ಅಕ್ಟೋಬರ್ 7, 2023 ರಂದು ದೆಹಲಿಯಿಂದ ಟೆಲ್ ಅವೀವ್‌ ಏರ್ ಇಂಡಿಯಾ ಫ್ಲೈಟ್ ಮತ್ತು ಟೆಲ್ ಅವೀವ್‌ನಿಂದ ದೆಹಲಿಗೆ ಹಿಂದಿರುಗುವ AI140 ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಪ್ರಯಾಣಿಕರಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಎಲ್ಲಾ ಬೆಂಬಲವನ್ನು ನೀಡಲಾಗುತ್ತಿದೆ ಎಂದು ಏರ್ ಇಂಡಿಯಾ ವಕ್ತಾರರ ಹೇಳಿಕೆ ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಏರ್ ಇಂಡಿಯಾದ AI 139 ವಿಮಾನ ದೆಹಲಿಯಿಂದ ಮಧ್ಯಾಹ್ನ 3.35 ಕ್ಕೆ ಹೊರಟು 7.05 ಕ್ಕೆ ಟೆಲ್ ಅವೀವ್ ತಲುಪಬೇಕಿಗಿತ್ತು. ಹಿಂದಿರುಗುವ ವಿಮಾನ AI140 ರಾತ್ರಿ 10.10 ಕ್ಕೆ ಟೆಲ್ ಅವಿವ್‌ನಿಂದ ಹೊರಟು ಭಾನುವಾರ ಬೆಳಗ್ಗೆ 7 ಗಂಟೆಗೆ ದೆಹಲಿ ತಲುಪಬೇಕಿತ್ತು. ಈ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com