ತಾಂಜಾನಿಯಾ ಅಧ್ಯಕ್ಷರಿಗೆ ಜವಹರ್ ಲಾಲ್ ನೆಹರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ!

ಭಾರತ ಪ್ರವಾಸದಲ್ಲಿರುವ ತಾಂಜನಿಯಾ ಅಧ್ಯಕ್ಷೆ ಸಮಿಯಾ ಸುಲುಹು ಹಸ್ಸನ್‌ ಅವರಿಗೆ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರ್ ಪದವಿ ದೊರೆತಿದೆ.
ತಾಂಜಾನಿಯಾ ಅಧ್ಯಕ್ಷರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ತಾಂಜಾನಿಯಾ ಅಧ್ಯಕ್ಷರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ನವದೆಹಲಿ: ಭಾರತ ಪ್ರವಾಸದಲ್ಲಿರುವ ತಾಂಜನಿಯಾ ಅಧ್ಯಕ್ಷೆ ಸಮಿಯಾ ಸುಲುಹು ಹಸ್ಸನ್‌ ಅವರಿಗೆ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರ್ ಪದವಿ ದೊರೆತಿದೆ.

ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಕೇಂದ್ರ ಉನ್ನತ ಶಿಕ್ಷಣ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲಿ ಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು, ತಾಂಜನಿಯಾ ಅಧ್ಯಕ್ಷರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. 

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ತಾಂಜನಿಯಾ ಅಧ್ಯಕ್ಷರು, ಈ ಗೌರವ ಪದವಿ ನನ್ನ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ, ವಿದೇಶಿ ದೇಶದಿಂದ ನನಗೆ ಮೊದಲ ಬಾರಿಗೆ ಪದವಿ ನೀಡಲಾಗಿದೆ. ಇದು ವಿದೇಶಿ ವಿಶ್ವವಿದ್ಯಾಲಯದಿಂದ ನೀಡಲ್ಪಟ್ಟ ಮೊದಲನೆಯದು ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಎಸ್. ಜೈಶಂಕರ್, ಜೆಎನ್‌ಯುನಿಂದ ತಾಂಜೇನಿಯಾದ ಅಧ್ಯಕ್ಷ ಸಾಮಿಯಾ ಸುಲುಹು ಹಾಸನ್ ಅವರಿಗೆ ಗೌರವ ಡಾಕ್ಟರೇಟ್ ನೀಡುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿ ನಾನು ವಿಶೇಷವಾಗಿ ತೃಪ್ತಿ ಹೊಂದಿದ್ದೇನೆ. ಆಕೆಗೆ ಶೈಕ್ಷಣಿಕ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ, ನಾವು ಭಾರತದೊಂದಿಗೆ ಸುದೀರ್ಘ ಒಡನಾಟವನ್ನು ಗುರುತಿಸುವುದು ಮಾತ್ರವಲ್ಲದೆ ನಮ್ಮ ಸಂಬಂಧದ ಈ ನಿರ್ದಿಷ್ಟ ಅಂಶವನ್ನು ಎತ್ತಿ ತೋರಿಸುತ್ತೇವೆ ಎಂದರು.

 5,000ಕ್ಕೂ ಹೆಚ್ಚು ತಾಂಜೇನಿಯಾದ ಪ್ರಜೆಗಳು ಭಾರತದಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದಾರೆ. ಭಾರತದಲ್ಲಿ ಅಧ್ಯಯನ ಮಾಡುವ ಹಲವಾರು ತಾಂಜೇನಿಯಾದ ವಿದ್ಯಾರ್ಥಿಗಳಿಗೆ ಭಾರತವು ಆತಿಥ್ಯ ವಹಿಸಿದೆ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಯುವ ಮನಸ್ಸುಗಳಲ್ಲಿ ಆತ್ಮವಿಶ್ವಾಸದಿಂದ ತುಂಬಿದ್ದು, ಆವಿಷ್ಕಾರಗಳು ಮತ್ತು ನಾವೀನ್ಯತೆಗಳ ಮೂಲಕ ಭಾರತದ ಭವಿಷ್ಯವನ್ನು ರೂಪಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com