ಇಸ್ರೇಲ್-ಹಮಾಸ್ ಯುದ್ಧ: ಭಾರತೀಯ ರಾಯಭಾರ ಕಚೇರಿಯಿಂದ 24 ಗಂಟೆಗಳ ಸಹಾಯವಾಣಿ, ಜಾಗ್ರತೆಯಿಂದ ಇರಲು ಸೂಚನೆ

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ತೀವ್ರವಾಗುತ್ತಿದ್ದಂತೆ, ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ಸಿಲುಕಿರುವ ಭಾರತೀಯ ನಾಗರಿಕರಿಗಾಗಿ 24 ಗಂಟೆಗಳ ಸಹಾಯವಾಣಿ ಡೆಸ್ಕ್ ತೆರೆದಿದ್ದು,  ಭದ್ರತಾ ಸಲಹೆಗಳನ್ನು ಪಾಲಿಸುವಂತೆ ಹೇಳಿದೆ.
ಇಸ್ರೇಲ್ ನಲ್ಲಿ ದಾಳಿಯಿಂದ ಮಹಿಳೆ, ಮಗುವನ್ನು ರಕ್ಷಿಸುತ್ತಿರುವ ಭದ್ರತಾ ಪಡೆಗಳ ಚಿತ್ರ
ಇಸ್ರೇಲ್ ನಲ್ಲಿ ದಾಳಿಯಿಂದ ಮಹಿಳೆ, ಮಗುವನ್ನು ರಕ್ಷಿಸುತ್ತಿರುವ ಭದ್ರತಾ ಪಡೆಗಳ ಚಿತ್ರ

ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ತೀವ್ರವಾಗುತ್ತಿದ್ದಂತೆ, ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ಸಿಲುಕಿರುವ ಭಾರತೀಯ ನಾಗರಿಕರಿಗಾಗಿ 24 ಗಂಟೆಗಳ ಸಹಾಯವಾಣಿ ಡೆಸ್ಕ್ ತೆರೆದಿದ್ದು,  ಭದ್ರತಾ ಸಲಹೆಗಳನ್ನು ಪಾಲಿಸುವಂತೆ ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ, ಅಲ್ಲಿರುವ ಭಾರತೀಯ ನಾಗರಿಕರಿಗೆ ಸಹಾಯ ಮಾಡಲು ನಿರಂತರವಾಗಿ ಶ್ರಮಿಸುತ್ತಿರುವುದಾಗಿ ಹೇಳಿದೆ. 'ರಾಯಭಾರ ಕಚೇರಿಯು 24 ಗಂಟೆಗಳ ಸಹಾಯವಾಣಿ ಮೂಲಕ ಇಸ್ರೇಲ್‌ನಲ್ಲಿರುವ ನಮ್ಮ ಪ್ರಜೆಗಳಿಗೆ ಸಹಾಯ ಮಾಡಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ದಯವಿಟ್ಟು ಶಾಂತವಾಗಿ ಮತ್ತು ಜಾಗರೂಕರಾಗಿರಿ ಮತ್ತು ಭದ್ರತಾ ಸಲಹೆಗಳನ್ನು ಪಾಲಿಸಿ' ಎಂದು ಎಕ್ಸ್ ನಲ್ಲಿ ಬರೆದಿದೆ. 

ಪ್ರಸ್ತುತ ಸಂಘರ್ಷದ ಮಧ್ಯೆ ಸಹಾಯದ ಅಗತ್ಯವಿರುವ ಅಥವಾ ರಾಯಭಾರ ಕಚೇರಿಯಲ್ಲಿ ನೋಂದಾಯಿಸಲು ಬಯಸುವ ಭಾರತೀಯ ನಾಗರಿಕರಿಗಾಗಿ 24/7 ಸಹಾಯವಾಣಿ ಸಂಖ್ಯೆ +972-35226748 ಮತ್ತು +972-543278392 ಅನ್ನು
ಯುದ್ಧ ಪೀಡಿತ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತೆರೆದಿದೆ.  "24*7 ತುರ್ತು ಸಹಾಯವಾಣಿ/ಸಂಪರ್ಕ: ದೂರವಾಣಿ  ಸಂಖ್ಯೆ 972-35226748, 972-543278392, ಇಮೇಲ್: cons1.telaviv@mea.gov.in" ಸಂಪರ್ಕಿಸಬಹುದು ಎಂದು ತಿಳಿಸಿದೆ. 

ಈ ಮಧ್ಯೆ ಇಸ್ರೇಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಮತ್ತು ಆಂಧ್ರಪ್ರದೇಶದ ಅನಿವಾಸಿ ತೆಲುಗು ಸೊಸೈಟಿ (APNRTS) 24/7 ತುರ್ತು ಸಹಾಯವಾಣಿ ಸಂಖ್ಯೆಗಳೊಂದಿಗೆ ಸಹಾಯವಾಣಿಗಳನ್ನು ತೆರೆದಿದೆ. ಆಂಧ್ರಪ್ರದೇಶ ಸರ್ಕಾರದ ಘಟಕವಾದ ಆಂಧ್ರಪ್ರದೇಶ ಅನಿವಾಸಿ ತೆಲುಗು ಸೊಸೈಟಿ  ತುರ್ತು ಸಹಾಯವಾಣಿಯೊಂದಿಗೆ ಆಂಧ್ರಪ್ರದೇಶದ ಅನಿವಾಸಿ ತೆಲುಗರನ್ನು ಇಸ್ರೇಲ್‌ನಿಂದ ಹಿಂದಿರುಗಿಸಲು ಸಹಾಯ ಮಾಡಲು ಹಾಗೂ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕಿಸಲು ಸಿದ್ಧವಾಗಿದೆ ಎಂದು  ಅಧಿಕೃತ ಪ್ರಕಟಣೆ ತಿಳಿಸಿದೆ.

ಭಾರತೀಯ ರಾಯಭಾರಿ ಕಚೇರಿ, ಟೆಲ್ ಅವಿವ್, ಇಸ್ರೇಲ್ ಇಸ್ರೇಲ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಪ್ರಮುಖ ಸಲಹೆಯನ್ನು ನೀಡಿದ್ದು, ಭಾರತೀಯ ನಾಗರಿಕರು ಜಾಗರೂಕರಾಗಿರಲು, ಸುರಕ್ಷತಾ ಶಿಷ್ಟಾಚಾರ ಗಮನಿಸಲು ಮತ್ತು ಸ್ಥಳೀಯ ಸರ್ಕಾರದ ಸಲಹೆಯಂತೆ ಸುರಕ್ಷತಾ ಶೆಲ್ಟರ್‌ಗಳಿಗೆ ಹತ್ತಿರದಲ್ಲಿರಲು ಅಧಿಕಾರಿಗಳು ವಿನಂತಿಸಿದ್ದಾರೆ. ಇಸ್ರೇಲ್‌ಗೆ ಪ್ರಯಾಣಿಸಲು ಯೋಜಿಸುತ್ತಿರುವ ಭಾರತೀಯ ಪ್ರಜೆಗಳು ಪರಿಸ್ಥಿತಿ ಸಾಮಾನ್ಯವಾಗುವವರೆಗೆ ತಮ್ಮ ಪ್ರಯಾಣದ ಯೋಜನೆಗಳನ್ನು ಮರುಪರಿಶೀಲಿಸುವಂತೆ ಸೂಚಿಸಲಾಗಿದೆ.

"ಇಸ್ರೇಲ್‌ನಲ್ಲಿರುವ ಆಂಧ್ರಪ್ರದೇಶದ ಅನಿವಾಸಿ ತೆಲುಗು ನಿವಾಸಿಗಳು ಯಾವುದೇ ಸಹಾಯಕ್ಕಾಗಿ APNRTS 24/7 ಸಹಾಯವಾಣಿ ಸಂಖ್ಯೆ  91 85000 27678(w), 0863-2340678  ಸಂಪರ್ಕಿಸಬಹುದು. ಇಸ್ರೇಲ್‌ನಲ್ಲಿರುವ ಅವರ ಆತ್ಮೀಯರಿಗೆ ಯಾವುದೇ ಸಹಾಯದ ಅಗತ್ಯವಿದ್ದರೆ ಅನಿವಾಸಿ ಭಾರತೀಯರ ಕುಟುಂಬ ಸದಸ್ಯರಿಗೆ APNRTS ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಸಲಹೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com