ಪೇಮೆಂಟ್ ಗೇಟ್ ವೇ ವ್ಯವಸ್ಥೆಗೆ ಕನ್ನ ಹಾಕಿ 16,180 ಕೋಟಿ ದೋಚಿದ್ದ ಮೂವರ ಬಂಧನ!

ಪೇಮೆಂಟ್ ಗೇಟ್ ವೇ ಸರ್ವೀಸ್ ಪೂರೈಕೆದಾರ ವ್ಯವಸ್ಥೆಗೆ ಕನ್ನ ಹಾಕಿ 16,180 ಕೋಟಿ ರೂಪಾಯಿ ದೋಚಿದ್ದ ಮೂವರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. 
ಆನ್ ಲೈನ್ ವಂಚನೆ (ಸಂಗ್ರಹ ಚಿತ್ರ)
ಆನ್ ಲೈನ್ ವಂಚನೆ (ಸಂಗ್ರಹ ಚಿತ್ರ)

ಮುಂಬೈ: ಪೇಮೆಂಟ್ ಗೇಟ್ ವೇ ಸರ್ವೀಸ್ ಪೂರೈಕೆದಾರ ವ್ಯವಸ್ಥೆಗೆ ಕನ್ನ ಹಾಕಿ 16,180 ಕೋಟಿ ರೂಪಾಯಿ ದೋಚಿದ್ದ ಮೂವರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. 

ಅಮೋಲ್ ಅಂದಾಳೆ ಅಲಿಯಾಸ್ ಅಮಾನ್, ಪ್ರಮುಖ ಆರೋಪಿಯಾಗಿದ್ದು ಆತನ ವಿರುದ್ಧ ನೌಪಾದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಥಾಣೆಯ ಸೈಬರ್ ಸೆಲ್ ಪೊಲೀಸ್ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ. ಈ ಆರ್ಥಿಕ ಅಪರಾಧ ನಡೆಸುವುದಕ್ಕಾಗಿ ಅಗತ್ಯವಿದ್ದ ಕೆವೈಸಿ ವಿವರಗಳನ್ನು ವ್ಯವಸ್ಥೆ ಮಾಡುತ್ತಿದ್ದ ಆರೋಪ ಅಂದಾಳೆ ವಿರುದ್ಧ ಕೇಳಿಬಂದಿದೆ. 

ಇನ್ನಿಬ್ಬರು ಆರೋಪಿಗಳನ್ನು ಅನೂಬ್ ದುಬೆ (26)  ಹಾಗೂ ಸಂಜಯ್ ನಾಮದೇವ್ ಗಾಯಕ್ವಾಡ್ (42) ಎಂದು ಗುರುತಿಸಲಾಗಿದೆ. 

ಪೊಲೀಸರ ಪ್ರಕಾರ, ಈ ವಂಚನೆ ಬಹಳ ಸಮಯದಿಂದ ನಡೆಯುತ್ತಿತ್ತು, ಆದರೆ ಏಪ್ರಿಲ್ 2023 ರಲ್ಲಿ ಕಂಪನಿಯ ಪೇಮೆಂಟ್ ಗೇಟ್‌ವೇ ಸಿಸ್ಟಮ್ ಹ್ಯಾಕ್ ಆಗಿರುವ ಬಗ್ಗೆ ಶ್ರೀನಗರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಅದು ಬೆಳಕಿಗೆ ಬಂದಿದೆ. ತನಿಖೆಯ ವೇಳೆ ಸೈಬರ್ ಸೆಲ್ ತಂಡಕ್ಕೆ 16,180 ಕೋಟಿ ರೂ.ಗೂ ಅಧಿಕ ಮೊತ್ತದ ಸಂಶಯಾಸ್ಪದ ವಹಿವಾಟು ನಡೆದಿದೆ ಎಂಬ ಅಂಶ ಬಹಿರಂಗವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com