ರಾಮೇಶ್ವರಂ: ಲಂಕಾದಿಂದ 27 ಮೀನುಗಾರರ ಬಂಧನ, ಬಿಡುಗಡೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ

ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿರುವ ರಾಮೇಶ್ವರಂ ಮೀನುಗಾರರು ಮತ್ತು ದೋಣಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಮೇಶ್ವರಂನ ಮೀನುಗಾರರ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ.ದೋಣಿಗಳು ಬಂದ್ ಆಗಿದ್ದು, ಮೀನುಗಾರರು ಮೀನುಗಾರಿಕೆಗೆ ತೆರಳಿಲ್ಲ.
ಮೀನುಗಾರರ ಮುಷ್ಕರ
ಮೀನುಗಾರರ ಮುಷ್ಕರ

ರಾಮೇಶ್ವರಂ: ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿರುವ ರಾಮೇಶ್ವರಂ ಮೀನುಗಾರರು ಮತ್ತು ದೋಣಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಮೇಶ್ವರಂನ ಮೀನುಗಾರರ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ. ದೋಣಿಗಳು ಬಂದ್ ಆಗಿದ್ದು, ಮೀನುಗಾರರು ಮೀನುಗಾರಿಕೆಗೆ ತೆರಳಿಲ್ಲ.

ಅಕ್ಟೋಬರ್ 14 ರಂದು 400 ಕ್ಕೂ ಹೆಚ್ಚು ದೋಣಿಗಳಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಾಗ ಶ್ರೀಲಂಕಾ ನೌಕಪಡೆ 27 ಮೀನುಗಾರರೊಂದಿಗೆ 5 ದೋಣಿಗಳನ್ನು ವಶಕ್ಕೆ ಪಡೆದು ತಲೈಮನ್ನಾರ್ ಮತ್ತು ಕಂಕೆಸಂತುರೈ ಬಂದರಿಗೆ ಕರೆದೊಯ್ದು, ಮುಂದಿನ ಕಾನೂನು ಕ್ರಮಕ್ಕಾಗಿ ತಲೈಮನ್ನಾರ್ ಮತ್ತು ಜಾಫ್ನಾ ಕಡಲಿನ ಇನ್ಸ್ ಪೆಕ್ಟರ್ ಗೆ ಹಸ್ತಾಂತರಿಸಿತು ಎಂದು ತಮಿಳುನಾಡು ದೋಣಿ ಮೀನುಗಾರರ ಕಲ್ಯಾಣ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಜೆ. ಬೋಸ್ ಹೇಳಿದ್ದಾರೆ, 

ಈ ಹಿಂದೆ, ಶ್ರೀಲಂಕಾದ ನೌಕಾಪಡೆಯು ಸೆಪ್ಟೆಂಬರ್ 13 ರಂದು ಒಳನಾಡಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇರೆಗೆ 17 ಮೀನುಗಾರರನ್ನು ಮತ್ತು 3 ದೋಣಿಗಳನ್ನು ಬಂಧಿಸಿತ್ತು. ಈ ಸಂಬಂದ ಶ್ರೀಲಂಕಾ ನೌಕಪಡೆಯಿಂದ ಭಾರತೀಯ ಮೀನುಗಾರರನ್ನು ರಕ್ಷಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ತಮಿನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com