'ಮೂಲಭೂತ ಹಕ್ಕಲ್ಲ': ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸದ 'ಸುಪ್ರೀಂ' ನಿರ್ಧಾರಕ್ಕೆ ವಿಎಚ್‌ಪಿ ಸ್ವಾಗತ!

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ. ಇನ್ನು ಮಗುವನ್ನು ದತ್ತು ಪಡೆಯುವ ಹಕ್ಕನ್ನು 'ಸಲಿಂಗಿಗಳಿಗೆ' ನೀಡದಿರುವ ಕೋರ್ಟ್ ನಿರ್ಧಾರವು 'ಒಳ್ಳೆಯ ಹೆಜ್ಜೆ' ಎಂದು ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವುದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ. ಇನ್ನು ಮಗುವನ್ನು ದತ್ತು ಪಡೆಯುವ ಹಕ್ಕನ್ನು 'ಸಲಿಂಗಿಗಳಿಗೆ' ನೀಡದಿರುವ ಕೋರ್ಟ್ ನಿರ್ಧಾರವು 'ಒಳ್ಳೆಯ ಹೆಜ್ಜೆ' ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ ನಂತರ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ) ಈ ಹೇಳಿಕೆ ನೀಡಿದೆ.

ಪೀಠದ ನೇತೃತ್ವ ವಹಿಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ 21 ಅರ್ಜಿಗಳ ಸಂಬಂಧ ತೀರ್ಪು ಪ್ರಕಟಿಸಿದರು. ಈ ಬಗ್ಗೆ ನ್ಯಾಯಾಲಯಕ್ಕೆ ಕಾನೂನನ್ನು ರಚಿಸುವ ಅಧಿಕಾರವಿಲ್ಲ. ಆದರೆ ವಿಶೇಷ ವಿವಾಹ ಕಾಯ್ದೆಯನ್ನು ಬದಲಾಯಿಸುವ ಅಧಿಕಾರ ಸಂಸತ್ತಿಗೆ ಎಂದು ಹೇಳಿದರು.

ಸಲಿಂಗಕಾಮಿ ವಿವಾಹ ಮತ್ತು ದತ್ತು ಸ್ವೀಕಾರಕ್ಕೆ ಕಾನೂನು ಮಾನ್ಯತೆ ನೀಡದಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಆರ್‌ಎಸ್‌ಎಸ್ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಸಂಬಂಧಿಸಿದ ಎಲ್ಲಾ ಕಕ್ಷಿದಾರರ ವಾದವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್, ಮದುವೆಯ ರೂಪದಲ್ಲಿ ಇಬ್ಬರು ಸಲಿಂಗಕಾಮಿಗಳ ನಡುವಿನ ಸಂಬಂಧವನ್ನು ನೋಂದಣಿಗೆ ಅರ್ಹವಲ್ಲ ಎಂದು ತೀರ್ಪು ನೀಡಿರುವುದು ನಮಗೆ ತೃಪ್ತಿ ತಂದಿದೆ ಎಂದು ವಿಎಚ್‌ಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com