ನಕಲಿ ಜನನ ದಾಖಲೆ ಪ್ರಕರಣ: ಎಸ್‌ಪಿ ನಾಯಕ ಅಜಂ ಖಾನ್, ಪತ್ನಿ, ಪುತ್ರನಿಗೆ ಏಳು ವರ್ಷ ಜೈಲು ಶಿಕ್ಷೆ

ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಎಸ್‌ಪಿ ನಾಯಕ ಅಜಂ ಖಾನ್‌ಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಷ್ಟೇ ಅಲ್ಲ, ಅವರ ಪುತ್ರ ಅಬ್ದುಲ್ಲಾ ಅಜಂ ಮತ್ತು ಪತ್ನಿ ತಂಝೀಮ್ ಫಾತಿಮಾ ಕೂಡ ತಲಾ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಅಜಂ ಖಾನ್ ಕುಟುಂಬ
ಅಜಂ ಖಾನ್ ಕುಟುಂಬ
Updated on

ಲಖನೌ: ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಎಸ್‌ಪಿ ನಾಯಕ ಅಜಂ ಖಾನ್‌ಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಷ್ಟೇ ಅಲ್ಲ, ಅವರ ಪುತ್ರ ಅಬ್ದುಲ್ಲಾ ಅಜಂ ಮತ್ತು ಪತ್ನಿ ತಂಝೀಮ್ ಫಾತಿಮಾ ಕೂಡ ತಲಾ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ರಾಮ್‌ಪುರದ ಎಂಪಿ-ಎಂಎಲ್‌ಎಲ್ ನ್ಯಾಯಾಲಯವು ವಿಚಾರಣೆಯ ನಂತರ ತೀರ್ಪು ನೀಡಿ ಮೂವರನ್ನೂ ನೇರವಾಗಿ ಜೈಲಿಗೆ ಕಳುಹಿಸಲು ಆದೇಶಿಸಿದೆ. 

ವಾಸ್ತವವಾಗಿ ಈ ಘಟನೆ 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದೆ. ಆ ಸಮಯದಲ್ಲಿ, ಅಜಂ ಖಾನ್ ಅವರ ಮಗ ಅಬ್ದುಲ್ಲಾ ರಾಂಪುರದ ಸ್ವರ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಚುನಾವಣಾ ನಮೂನೆಯಲ್ಲಿ ನಮೂದಿಸಿದ್ದ ವಯಸ್ಸು ನಕಲಿಯಾಗಿತ್ತು. ಅಜಂ ಖಾನ್ ನಕಲಿ ಜನನ ಪ್ರಮಾಣ ಪತ್ರ ತಯಾರಿಸಿ ಚುನಾವಣೆಗೆ ಸ್ಪರ್ಧಿಸಿದ್ದರು.

ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 420, 467, 468 ಮತ್ತು 471ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಅಜಂ ಖಾನ್, ಅಬ್ದುಲ್ಲಾ ಮತ್ತು ತಂಝೀಮ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಅಬ್ದುಲ್ಲಾ ಮೊದಲ ಜನನ ಪ್ರಮಾಣಪತ್ರವನ್ನು ವಿದೇಶ ಪ್ರವಾಸಕ್ಕಾಗಿ ಪಡೆದಿದ್ದರೆ, ಎರಡನೆಯದು ಸರ್ಕಾರಿ ಕೆಲಸ ಮತ್ತು ಜೌಹರ್ ವಿಶ್ವವಿದ್ಯಾಲಯಕ್ಕಾಗಿ ಮಾಡಲ್ಪಟ್ಟಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಎಲ್ಲವನ್ನೂ ಯೋಜಿತ ಪಿತೂರಿಯ ಅಡಿಯಲ್ಲಿ ಮಾಡಲಾಗಿದೆ. 2012ರ ಜೂನ್ 28ರಂದು ರಾಂಪುರ ಪುರಸಭೆಯಿಂದ ಮೊದಲ ಜನ್ಮ ಪ್ರಮಾಣಪತ್ರವನ್ನು ನೀಡಲಾಗಿದ್ದು, ಅದರಲ್ಲಿ ಅವರ ಜನ್ಮ ಸ್ಥಳವನ್ನು ರಾಂಪುರ ಎಂದು ನಮೂದಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಆದರೆ, ಎರಡನೇ ಜನನ ಪ್ರಮಾಣಪತ್ರವನ್ನು 2015ರ ಜನವರಿಯಲ್ಲಿ ಲಖನೌದಲ್ಲಿ ಪಡೆಯಲಾಗಿತ್ತು. ಇದರಲ್ಲಿ ಅವರ ಜನ್ಮ ಸ್ಥಳವನ್ನು ಲಖನೌ ಎಂದು ತೋರಿಸಲಾಗಿದೆ. ಈ ಪ್ರಕರಣದಲ್ಲಿ ಆಕಾಶ್ ಸಕ್ಸೇನಾ ಅವರು 2019ರಲ್ಲಿ ಲಖನೌದ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಮ್‌ಪುರದ ಎಂಪಿ-ಎಂಎಲ್‌ಎಲ್ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳ ಸುದೀರ್ಘ ಪ್ರಕರಣದಲ್ಲಿ 30ಕ್ಕೂ ಹೆಚ್ಚು ಸಾಕ್ಷಿಗಳು ಸಾಕ್ಷ್ಯ ನುಡಿದರು. ಅಗತ್ಯ ಸಂಬಂಧಿತ ದಾಖಲೆಗಳನ್ನು ಎರಡೂ ಕಡೆಯವರು ಮಂಡಿಸಿದರು. ಈ ವೇಳೆ ಅಬ್ದುಲ್ಲಾ ಅವರ ವಿಧಾನಸಭೆ ಸದಸ್ಯತ್ವ ರದ್ದಾಗಿದೆ. ಇದು ಅವನಿಗೆ ಎರಡು ಬಾರಿ ಸಂಭವಿಸಿದೆ. ಆತನಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com