ಪತಿಯಿಂದ ವಿಚ್ಛೇದನ ಪಡೆದ ಮಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ತವರುಮನೆಗೆ ಕರೆತಂದ ತಂದೆ!

ಸಾಮಾಜಿಕವಾಗಿ ಸ್ಥಾಪಿತ ಮನಸ್ಥಿತಿಯನ್ನು ಮೀರುವ ಘಟನೆಯೊಂದರಲ್ಲಿ ಜಾರ್ಖಂಡ್ ನಲ್ಲಿ ವ್ಯಕ್ತಿಯೋರ್ವ ತನ್ನ ಮಗಳ ವಿಚ್ಛೇದನವನ್ನು ಸಂಭ್ರಮಿಸಿ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಮಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ತವರುಮನೆಗೆ ಕರೆತಂದ ತಂದೆ!
ಮಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ತವರುಮನೆಗೆ ಕರೆತಂದ ತಂದೆ!
Updated on

ಜಾರ್ಖಂಡ್: ಸಾಮಾಜಿಕವಾಗಿ ಸ್ಥಾಪಿತ ಮನಸ್ಥಿತಿಯನ್ನು ಮೀರುವ ಘಟನೆಯೊಂದರಲ್ಲಿ ಜಾರ್ಖಂಡ್ ನಲ್ಲಿ ವ್ಯಕ್ತಿಯೋರ್ವ ತನ್ನ ಮಗಳ ವಿಚ್ಛೇದನವನ್ನು ಸಂಭ್ರಮಿಸಿ ಅದ್ಧೂರಿ ಕಾರ್ಯಕ್ರಮ ಏರ್ಪಡಿಸಿದ್ದಾರೆ.

ಗಂಡನ ಮನೆಯಲ್ಲಿ ಕಿರುಕುಳಕ್ಕೆ ಒಳಗಾಗಿದ್ದ ಮಗಳನ್ನು ವಾಪಸ್ ತವರುಮನೆಗೆ ಕರೆತಂದಿರುವ ತಂದೆ, ಮಗಳು ವಾಪಸ್ ಮನೆಗೆ ಬರುವಾಗ ಪಟಾಕಿ ಹೊಡೆದು, ವಾದ್ಯಗಳನ್ನು ನುಡಿಸಿ ಸಂಭ್ರಮಿಸಿದ್ದಾರೆ.

ರಾಂಚಿಯ ಕೈಲಾಶ್ ನಗರ ಕುಮ್ಹರತೋಲಿಯ ನಿವಾಸಿಯಾಗಿರುವ ಪ್ರೇಮ್ ಗುಪ್ತಾ, ತಮ್ಮ ಮಗಳು, ಅದ್ಧೂರಿ ಕಾರ್ಯಕ್ರಮ, ವಾದ್ಯಗಳ ನಡುವೆ ಮನೆಗೆ ವಾಪಸ್ಸಾಗುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಜನರು ಹೆಣ್ಣುಮಕ್ಕಳನ್ನು ಬಹಳ ಮಹತ್ವಾಕಾಂಕ್ಷೆಗಳಿಂದ ಮತ್ತು ಆಡಂಬರದಿಂದ ಮದುವೆಯಾಗುತ್ತಾರೆ, ಆದರೆ ಸಂಗಾತಿ ಮತ್ತು ಕುಟುಂಬವು ತಪ್ಪಾಗಿದ್ದರೆ ಅಥವಾ ಅದು ತಪ್ಪಾಗಿ ಕೆಲಸ ಮಾಡಿದರೆ, ನೀವು ನಿಮ್ಮ ಮಗಳನ್ನು ಗೌರವ ಮತ್ತು ಘನತೆಯಿಂದ ನಿಮ್ಮ ಮನೆಗೆ ಮರಳಿ ಕರೆತರಬೇಕು, ಏಕೆಂದರೆ ಹೆಣ್ಣುಮಕ್ಕಳು ಬಹಳ ಅಮೂಲ್ಯ ಎಂದು ಹೇಳಿದ್ದಾರೆ.
 

ಪ್ರೇಮ್ ಗುಪ್ತಾ ತಮ್ಮ ಮಗಳು ಸಾಕ್ಷಿ ಗುಪ್ತಾ ಅವರನ್ನು ಜಾರ್ಖಂಡ್ ವಿದ್ಯುತ್ ಪೂರೈಕೆ ನಿಗಮದ ಸಹಾಯಕ ಇಂಜಿನಿಯರ್ ಸಚಿನ್ ಕುಮಾರ್ ಅವರೊಂದಿಗೆ ಕಳೆದ ವರ್ಷ ಏಪ್ರಿಲ್ ನಲ್ಲಿ ಮದುವೆ ಮಾಡಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಪತಿಯಿಂದ ಚಿತ್ರಹಿಂಸೆಗೆ ಒಳಗಾಗಿದ್ದಳು. ಕೆಲವೊಮ್ಮೆ, ಆಕೆಯ ಪತಿ ಅವಳನ್ನು ನಿಂದಿಸಿ ಮನೆಯಿಂದ ಹೊರಹಾಕುತ್ತಿದ್ದ. ಮದುವೆಯಾದ ಒಂದು ವರ್ಷದ ನಂತರ, ಆಕೆಯ ಪತಿ ಈಗಾಗಲೇ ಎರಡು ಬಾರಿ ಮದುವೆಯಾಗಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಆದಾಗ್ಯೂ, ಅವಳು ತನ್ನ ಮದುವೆಯನ್ನು "ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು ಆದರೆ ವ್ಯರ್ಥವಾಯಿತು. ಅಂತಿಮವಾಗಿ, ಆಕೆ ಪತಿಯ ಮನೆಯಿಂದ ಹೊರನಡೆಯಲು ನಿರ್ಧರಿಸಿದಳು. ಮಗಳ ನಿರ್ಧಾರವನ್ನು ಸ್ವಾಗತಿಸಿದ ತಂದೆ, ತವರು ಮನೆಗೆ ಅದ್ಧೂರಿಯಾಗಿ ಕರೆತಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com