

ನವದೆಹಲಿ: ವಿಜಯದಶಮಿ ಅಂಗವಾಗಿ ಮಂಗಳವಾರ ದೇಶದ ಹಲವೆಡೆ 'ರಾವಣ ದಹನ' ಕಾರ್ಯಕ್ರಮ ನಡೆಯಿತು. ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ಲವಕುಶ ರಾಮಲೀಲಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಶ್ರೀರಾಮ್ ಘೋಷಣೆಯೊಂದಿಗೆ ರಾವಣ ಪ್ರತಿಕೃತಿ ದಹನ ಮಾಡಿದರು.
ಕೆಂಪುಕೋಟೆಯಲ್ಲಿ 50 ವರ್ಷದಿಂದ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಮಹಿಳೆಯಾಗಿ ರಣಾವತ್ ಬಾಣ ಬಿಡುವ ಮೂಲಕ ರಾವಣ ಪ್ರತಿಕೃತಿ ದಹಿಸಿದರು. ಹಲವು ಮಂದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಳೆದ ವರ್ಷ ಟಾಲಿವುಡ್ ನಟ ಪ್ರಭಾಸ್ ರಾವಣ ಪ್ರತಿಕೃತಿ ದಹನ ಮಾಡಿದ್ದರು.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ರಾವಣ ದಹನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖ್ ಪಾಲ್ಗೊಂಡರು. ಬಾಣ ಬಿಡುವ ಮೂಲಕ ರಾವಣ ಪ್ರತಿಕೃತಿ ಸಂಹಾರ ಮಾಡಿದರು.
Advertisement