ಆಗ್ರಾದಲ್ಲಿ ಬೀದಿನಾಯಿ ದಾಳಿಗೆ ಎಂಟು ವರ್ಷದ ಬಾಲಕಿ ಬಲಿ

ಎರಡು ವಾರಗಳ ಹಿಂದೆ ಆಗ್ರಾದಲ್ಲಿ ಬೀದಿನಾಯಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಟು ವರ್ಷದ ಬಾಲಕಿ ಶನಿವಾರ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಗ್ರಾ: ಎರಡು ವಾರಗಳ ಹಿಂದೆ ಆಗ್ರಾದಲ್ಲಿ ಬೀದಿನಾಯಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಟು ವರ್ಷದ ಬಾಲಕಿ ಶನಿವಾರ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಬಾಲಕಿಯ ತಾಯಿ ಆ್ಯಂಟಿ ರೇಬೀಸ್ ಲಸಿಕೆ(ಎಆರ್‌ವಿ) ಬದಲಿಗೆ ಮನೆಮದ್ದುಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಬಾಲಕಿಯನ್ನು ನಮ್ಮ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ನಮ್ಮ ಸಲಹೆಯನ್ನು ಆಕೆಯ ಕುಟುಂಬ ಆರಂಭದಲ್ಲಿ ನಿರ್ಲಕ್ಷಿಸಿತು. ಬಾಲಕಿಯ ಸ್ಥಿತಿ ಗಂಭೀರವಾದ ನಂತರ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಬಾಹ್ ಬ್ಲಾಕ್ ಸಮುದಾಯ ಆರೋಗ್ಯ ಕೇಂದ್ರದ(ಸಿಎಚ್‌ಸಿ) ಮುಖ್ಯಸ್ಥ ಡಾ. ಜಿತೇಂದ್ರ ವರ್ಮಾ ಪಿಟಿಐಗೆ ತಿಳಿಸಿದ್ದಾರೆ.

"ಸುಮಾರು 10-15 ದಿನಗಳ ಹಿಂದೆ ಬಾಲಕಿಗೆ ಬೀದಿ ನಾಯಿಯೊಂದು ಕಚ್ಚಿದೆ. ಬಾಲಕಿ ತನ್ನ ತಾಯಿಯನ್ನು ಹೊರತುಪಡಿಸಿ ತನ್ನ ಕುಟುಂಬದ ಇತರ ಯಾರಿಗೂ ಘಟನೆಯ ಬಗ್ಗೆ ತಿಳಿಸಿಲ್ಲ. ತಾಯಿ ಮನೆಮದ್ದುಗಳನ್ನು ಮಾತ್ರ ನೀಡಿದ್ದಾರೆ. ಆದರೆ ಬಾಲಕಿಯ ಸ್ಥಿತಿ ಹದಗೆಟ್ಟಾಗ ಶನಿವಾರ ನಮ್ಮ ಬಳಿ ಕರೆತಂದರು ಎಂದು" ಡಾ. ಜಿತೇಂದ್ರ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com