ಚುನಾವಣಾ ಪ್ರಚಾರದಲ್ಲಿ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳಲ್ಲ: ಮಿಜೋರಾಂ ಮುಖ್ಯಮಂತ್ರಿ

ಮಿಜೋರಾಂ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಾಗ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಝೋರಂತಂಗ ಹೇಳಿದ್ದಾರೆ. 
ಪ್ರಧಾನಿ ಮೋದಿ, ಮಿಜೋರಾಂ ಮುಖ್ಯಮಂತ್ರಿ
ಪ್ರಧಾನಿ ಮೋದಿ, ಮಿಜೋರಾಂ ಮುಖ್ಯಮಂತ್ರಿ

ಐಜ್ವಾಲ್: ಮಿಜೋರಾಂ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಾಗ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಝೋರಂತಂಗ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಪ್ರಧಾನಿ ಅಕ್ಟೋಬರ್ 30 ರಂದು ಮಮಿತ್ ಪಟ್ಟಣಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. 

ಮಣಿಪುರ ಹಿಂಸಾಚಾರವನ್ನು ಉಲ್ಲೇಖಿಸಿರುವ ಝೋರಂತಂಗ, ಮಣಿಪುರದ ಜನರು (ಮೇಟಿಗಳು) ನೂರಾರು ಚರ್ಚ್ ಗಳನ್ನು ಸುಟ್ಟು ಹಾಕಿದಾಗ ಮಿಜೋಸ್ ಅಂತಹ ಕಲ್ಪನೆಯನ್ನು ಸಂಪೂರ್ಣವಾಗಿ ವಿರೋಧಿಸಿದರು. ಈ ಸಮಯದಲ್ಲಿ ಬಿಜೆಪಿಯೊಂದಿಗೆ ಸಹಾನುಭೂತಿ ಹೊಂದಿದ್ರೆ ಅದು ನನ್ನ ಪಕ್ಷಕ್ಕೆ ದೊಡ್ಡ ಮೈನಸ್ ಆಗಲಿದೆ ಎಂದು ಅವರು ಬಿಬಿಸಿ ನ್ಯೂಸ್ ಸಂದರ್ಶನದಲ್ಲಿ ಹೇಳಿದರು. 

"ಪ್ರಧಾನಿ ಒಬ್ಬರೇ ಬಂದು ವೇದಿಕೆ ಹಂಚಿಕೊಂಡರೆ ಒಳ್ಳೆಯದು, ನಾನೇ ಪ್ರತ್ಯೇಕವಾಗಿ ವೇದಿಕೆ ಏರುತ್ತೇನೆ ಎಂದರು. ಝೋರಂತಂಗಾ ಮಿಜೊ ನ್ಯಾಷನಲ್ ಫ್ರಂಟ್ ಪಕ್ಷ ಬಿಜೆಪಿ ನೇತೃತ್ವದ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಒಂದು ಭಾಗವಾಗಿದೆ ಮತ್ತು ಕೇಂದ್ರದಲ್ಲಿ ಎನ್ ಡಿಎ ಮಿತ್ರ ಪಕ್ಷವಾಗಿದೆ. ಆದರೆ, ಮಿಜೋರಾಂನಲ್ಲಿ ಬಿಜೆಪಿ ಜೊತೆಗೆ ಕೆಲಸ ಮಾಡುವುದಿಲ್ಲ, ಕಾಂಗ್ರೆಸ್ ನೇತೃತ್ವದ ಯಾವುದೇ ಮೈತ್ರಿಕೂಟದ ಭಾಗವಹಿಸಲು ಬಯಸುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. 

40 ಸದಸ್ಯರ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಡೆಯಲಿದ್ದು,ಡಿಸೆಂಬರ್ 3 ರಂದು ಫಲಿತಾಂಶ ಹೊರಬೀಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com